ಬೀದರ್:- ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಚೆನ್ನಬಸವ ಆಶ್ರಮದ ಬಳಿ ಏಕಾಏಕಿ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಮಿನಿ ಟಿಪ್ಪರ್ ಹೊತ್ತಿ ಉರಿದಿರುವ ಘಟನೆ ಜರುಗಿದೆ.
Advertisement
ಚಂದು ಎಂಬುವವರಿಗೆ ಸೇರಿದ ಮಿನಿ ಟಿಪ್ಪರ್ ಇದಾಗಿದ್ದು, ಕಿರಾಣಿ ಅಂಗಡಿಗಳಿಗೆ ಸಕ್ಕರೆ ಡೆಲಿವರಿ ಮಾಡುತ್ತಿದ್ದರು. ಇಂದು ರೇಡಿಯಂ ಅಂಗಡಿ ಬಳಿ ನಿಲ್ಲಿಸಿದ್ದಾಗ ಮಿನಿ ಟಿಪ್ಪರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿದೆ.
ಚಾಲಕ ಅಗ್ನಿ ಅವಘಡದಿಂದ ಪಾರಾಗಿದ್ದು, ಮಿನಿ ಟಿಪ್ಪರ್ ಬಹುತೇಕ ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ಬೆಂಕಿಯನ್ನು ನಂದಿಸಿದ್ದಾರೆ.