ಗದಗ:- ಜಾನುವಾರುಗಳಿಗಾಗಿ ಸಂಗ್ರಹಿಸಿದ ಬಣವೆಗಳು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗಾಹುತಿಯಾಗಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ತೆಗ್ಗಿನಭಾವನೂರಿನಲ್ಲಿ ಜರುಗಿದೆ.
Advertisement
ಘಟನೆಯಿಂದ ಇದೇ ಗ್ರಾಮದ ರೈತನ 11 ಶೇಂಗಾ ಹೊಟ್ಟು, ಗೋವಿನ ಜೋಳದ ಮೇವುವಿನ ಬಣವೆಗಳು ಸುಟ್ಟು ಭಸ್ಮವಾಗಿದೆ. ಲಕ್ಷಾಂತರ ರೂ. ಮೌಲ್ಯದ ಹೊಟ್ಟು ಮೇವು ಹಾನಿಯಾಗಿರುವುದ ಕಂಡು ರೈತ ಕಂಗಾಲಾಗಿದ್ದಾನೆ.
ವರ್ಷಾನುಗಟ್ಟಲೆ ಜಾನುವಾರುಗಳಿಗಾಗಿ ಸಂಗ್ರಹಿಸಿದ ಹೊಟ್ಟು ಮೇವು ಇದಾಗಿದ್ದು, ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.