ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪೇಠಬಣ ವ್ಯಾಪ್ತಿಯ ದುಂಡಿ ಬಸವೇಶ್ವರ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಒಕ್ಕಲಿಗಾಗಿ ಸಂಗ್ರಹಿಸಿಟ್ಟಿದ್ದ ಮೆಕ್ಕೆ ಜೋಳದ ತೆನೆಯ ರಾಶಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತಗುಲಿದ ಬೆಂಕಿಗೆ 50 ಕ್ವಿಂಟಲ್‌ಗಿಂತ ಹೆಚ್ಚು ಫಸಲು ಸುಟ್ಟು ಕರಕಲಾಗಿದೆ.
Advertisement
ಶರಣಪ್ಪ ಪರಮೇಶ್ವರಪ್ಪ ಬಟಗುರ್ಕಿ ಹಾಗೂ ಸೋಮಶೇಖರ ವೀರಭದ್ರಪ್ಪ ಜವಳಿ ಇವರಿಗೆ ಸಂಬಂಧಿಸಿದ ನೀರಾವರಿ ಜಮೀನಿನಲ್ಲಿ ಬೆಳೆದ ಬೆಳೆ ಬೆಂಕಿಗಾಹುತಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಗ್ರಾಮ ಅಧಿಕಾರಿ ಡಿ.ಎಸ್. ಕುಲಕರ್ಣಿ ಹಾನಿ ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ.