ಬಾಗಲಕೋಟೆ:- ಮುಧೋಳ ತಾಲೂಕಿನ ಲೋಕಾಪುರ ಸಮೀಪದ ದಿ ವಿಲೇಜ್ ಹೋಟೆಲ್ ಬಳಿ ನಡು ರಸ್ತೆಯಲ್ಲೇ ಅಕ್ಕಿ ಲಾರಿ ಹೊತ್ತಿ ಉರಿದ ಘಟನೆ ಜರುಗಿದೆ.
Advertisement
30 ಟನ್ ಅಕ್ಕಿ ತುಂಬಿಕೊಂಡು ಗಂಗಾವತಿಯಿಂದ ಕೊಲ್ಲಾಪುರಕ್ಕೆ ಹೊರಟಿದ್ದ ಲಾರಿ ರಾಜ್ಯ ಹೆದ್ದಾರಿ ಮಧ್ಯದಲ್ಲೇ ಬೆಂಕಿಗಾಹುತಿಯಾಗಿದೆ. ಟಯರ್ ಬ್ಲಾಸ್ಟ್ ಹಿನ್ನೆಲೆ ಲಾರಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಬೆಂಕಿ ಹತ್ತಿದ ಕೂಡಲೇ ಲಾರಿಯಿಂದ ಕೆಳಗಿಳಿದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.