ಗದಗ:- ಶೆಡ್ ನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದ ಎರಡು ಆಕಳು ಹಾಗೂ ಒಂದು ಕರು ಸುಟ್ಟುಕರಕಲಾದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಜರುಗಿದೆ.
ನವೀನ ನವಲೆ ಎನ್ನುವ ರೈತನಿಗೆ ಸೇರಿದ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿ ಕೊಳ್ಳುತ್ತಿದ್ದಂತೆ ಮೂಕಜೀವಿಗಳಾದ ಎರಡು ಆಕಳು, ಒಂದು ಕರು ಸಾವನ್ನಪ್ಪಿದೆ. ಅಲ್ಲದೇ ಎರಡು ಟ್ರ್ಯಾಕ್ಟರ್ ಹೊಟ್ಟು, 10 ಚೀಲ ಈರುಳ್ಳಿ, ಹಾಗೂ ಶೆಡ್ ಬೆಂಕಿಗಾಹುತಿಯಾಗಿದೆ.
ಘಟನೆಯಿಂದ ಸುಮಾರು 25 ಲಕ್ಷಕ್ಕೂ ಹೆಚ್ಚು ಹಾನಿ ಆಗಿದ್ದು, ರೈತ ಕುಟುಂಬ ಕಂಗಾಲಾಗಿದೆ.
ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



