ಮಂಡ್ಯ: ಕಾವೇರಿ ನದಿ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಶ್ರೀರಂಗಪಟ್ಟಣ ಟೌನ್ ರೈಲ್ವೆ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಬಳ್ಳಾರಿ ಮೂಲದ ಲಕ್ಷಣ್ ಸಹನಿ ಎಂಬವರು ಕಬ್ಬು ಕಡಿಯಲು ಬಂದಿದ್ದು,
Advertisement
ಕೆಲಸ ಮುಗಿಸಿಕೊಂಡು ಸ್ನಾನ ಮಾಡಲು ನದಿಗೆ ಇಳಿದಿದ್ದರು. ಈ ವೇಳೆ ನದಿಯಲ್ಲಿ ಅಕಸ್ಮಿಕವಾಗಿ ಹೆಚ್ಚಿನ ನೀರು ಹರಿದು, ಲಕ್ಷಣ್ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದರು.
ಸ್ಥಳೀಯರು ಈ ಬಗ್ಗೆ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ತುಂಬಿ ಹರಿಯುತ್ತಿದ್ದ ನದಿಯಲ್ಲಿ ಧೈರ್ಯದಿಂದ ರಕ್ಷಣಾ ಕಾರ್ಯ ನಡೆಸಿದ ಅಗ್ನಿಶಾಮಕ ಸಿಬ್ಬಂದಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.