ರಾಯಚೂರು:- ನಗರದ ಸದರಬಜಾರ್ ಪೊಲೀಸ್ ಠಾಣೆ ಎದುರು ಪಟಾಕಿ ಕಿಡಿ ತಗುಲಿ ಅಂಗಡಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಜರುಗಿದೆ.
ಬಟ್ಟೆ ತಯಾರಿಸುವ ಉಲ್ಲನ್ ದಾರದ ಅಂಗಡಿಗೆ ಪಟಾಕಿ ಕಿಡಿ ತಗುಲಿ ಬೆಂಕಿ ಬಿದ್ದಿದೆ. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸಪಟ್ಟಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಘಟನೆ ನಡೆದ ವೇಳೆ ಅದೇ ಮಾರ್ಗವಾಗಿ ತಾಯಿ ಭುವನೇಶ್ವರಿ ಮೆರವಣಿಗೆ ಸಾಗುತ್ತಿತ್ತು. ಬೆಂಕಿ ಅವಘಡ ಹಿನ್ನೆಲೆ ಕನ್ನಡಾಂಬೆ ಮೆರವಣಿಗೆಗೆ ಅಡ್ಡಿಯುಂಟಾಗಿದೆ. ಬೆಂಕಿ ಹೊತ್ತಿ ಉರಿದಿದ್ದರಿಂದ ಕೆಲ ಕಾಲ ಕನ್ನಡಾಂಬೆ ಮೆರವಣಿಗೆ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.



