ಕೊಪ್ಪಳ: ಸರ್ಕಾರ ಪತನವಾಗುತ್ತೆ ಎಂದು ಶಾಸಕ ಯತ್ನಾಳ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪಾಪ ಯತ್ನಾಳ್ ಹಗಲಿನಲ್ಲೇ ಕನಸು ಕಾಣುತ್ತಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಕೊಪ್ಪಳ ಹೊರವಲಯದ ಏರ್ಸ್ಟ್ರಿಪ್ನಲ್ಲಿ ಮಾತನಾಡಿದ ಸಿಎಂ,
Advertisement
ಬರ ಬಗ್ಗೆ ಚರ್ಚೆ ಮಾಡಲು ಪ್ರಧಾನಮಂತ್ರಿ ಅವಕಾಶವನ್ನೇ ಕೊಡುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರು ಬರ ಅಧ್ಯಯನ ಮಾಡಲು ಹೊರಟಿದ್ದಾರೆ. ಮೊದಲು ಕೇಂದ್ರ ಬಳಿ ಹೋಗಿ ಅನುದಾನ ಕೊಡಲು ಹೇಳಲಿ. ಪ್ರಧಾನಮಂತ್ರಿ ಮೋದಿ ತಮ್ಮ ಸಚಿವರು, ಶಾಸಕರನ್ನೇ ಭೇಟಿ ಆಗಲ್ಲ. ಇನ್ನು ನಮಗೆ ಏನು ಭೇಟಿಗೆ ಅವಕಾಶ ಕೊಡುತ್ತಾರೆ ಎಂದರು.