HDK ವಿರುದ್ಧ ಪೊಲೀಸ್ ಅಧಿಕಾರಿ ಮಾತನಾಡಿರುವುದು ಇತಿಹಾಸದಲ್ಲೇ ಮೊದಲು: ಆರ್. ಅಶೋಕ್

0
Spread the love

ಬೆಂಗಳೂರು: HDK ವಿರುದ್ಧ ಪೊಲೀಸ್ ಅಧಿಕಾರಿ ಮಾತನಾಡಿರುವುದು ಇತಿಹಾಸದಲ್ಲೇ ಮೊದಲು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾನೂನಿನಿಂದ ಬಚಾವಾಗಲು ಸಿಬ್ಬಂದಿಗೆ ಆ ರೀತಿ ಪತ್ರ ಬರೆದಿದ್ದಾರೆ. ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡಿದ್ದಾರೆ‌. ಈಗ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.

Advertisement

ಇನ್ನೂ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ವಿರುದ್ಧ ಪೊಲೀಸ್ ಅಧಿಕಾರಿ ಮಾತನಾಡಿರುವುದು ಇತಿಹಾಸದಲ್ಲೇ ಮೊದಲು. ಕಾನೂನಿನಲ್ಲಿ ಅದಕ್ಕೆ ಅವಕಾಶ ಇಲ್ಲ. ಅಧಿಕಾರಿ ಲಿಮಿಟ್ ಬಿಟ್ಟು ಹೋಗಿರುವುದು ಅಕ್ಷಮ್ಯ ಅಪರಾಧ. ಅವರ ವಿರುದ್ದ ಸಿಎಸ್ ಕ್ರಮ ಕೈಗೊಳ್ಳಬೇಕು. ಈ ರೀತಿ ನಾಳೆ ಸಿಎಂ, ಸಚಿವರ ಮೇಲೂ ಮಾತನಾಡುತ್ತಾರೆ. ಈ ಪರಂಪರೆ ಸರಿಯಲ್ಲ. ಅಧಿಕಾರದ ದುರುಪಯೋಗ ಆಗಿದೆ ಎಂದು ಕಿಡಿಕಾರಿದರು.


Spread the love

LEAVE A REPLY

Please enter your comment!
Please enter your name here