ಮೈಸಾ ಸಿನಿಮಾದ ಫಸ್ಟ್‌ ಲುಕ್ ರಿಲೀಸ್:‌ ಹಿಂದೆಂದೂ ಕಾಣದ ಅವತಾರದಲ್ಲಿ ರಶ್ಮಿಕಾ ಮಂದಣ್ಣ

0
Spread the love

ಇದುವರೆಗೂ ಲವ್ಲಿ ಲುಕ್‌ ನಲ್ಲಿ ಕಾಣಿಸಿಕೊಳ್ತಿದ್ದ ನಟಿ ರಶ್ಮಿಕಾ ಮಂದಣ್ಣ ರುದ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ರಶ್ಮಿಕಾ ಮಂದಣ್ಣ ನಟನೆಯ ಮೈಸಾ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು ಪೋಸ್ಟರ್‌ ನಲ್ಲಿ ನಟಿ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಂಡಿದಾರೆ.

Advertisement

ಸದ್ಯ ರಶ್ಮಿಕಾ ಮಂದಣ್ಣ ಮೈಸಾ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು ದುಷ್ಟರನ್ನ ಹೊಡೆದು ಹಾಕುತ್ತಿರೋ ಲುಕ್ ನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಕಣ್ಣಲ್ಲಿ ಆಕ್ರೋಶ ಇದ್ದು, ಮುಖದ ಮೇಲೆ ರಕ್ತದ ಕಲೆಗಳೂ ಇವೆ. ಕೈಯಲ್ಲಿ ಹಿಡಿದಿರುವ ಆಯುಧಕ್ಕೂ ರಕ್ತ ಅಂಟಿಕೊಂಡಿದೆ ಚಿತ್ರದಲ್ಲಿ ನಟಿ ವೀರಾ ರಾಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಮೈಸಾ ಚಿತ್ರವನ್ನ ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದು, ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ. ಮೈಸಾ ಪ್ಯಾನ್ ಇಂಡಿಯಾ ಚಿತ್ರ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರುತ್ತಿದೆ.


Spread the love

LEAVE A REPLY

Please enter your comment!
Please enter your name here