ಚಿತ್ರದುರ್ಗ:- ಚಿತ್ರದುರ್ಗ ನಗರದಲ್ಲಿ ಇಂದು ವರ್ಷದ ಮೊದಲ ಮಳೆಯಾಗಿದ್ದು, ಜನರಲ್ಲಿ ಸಂತಸ ಮನೆ ಮಾಡಿದೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಶುರುವಾದ ಮಳೆ ಮೂರು ಗಂಟೆವರೆಗೂ ಹದವಾಗಿ ಸುರಿಯಿತು.
Advertisement
ಮಳೆಯ ನಿರೀಕ್ಷೆ ಇಲ್ಲದೆ ರಸ್ತೆಯಲ್ಲಿ ಕಾರ್ಯನಿಮಿತ್ತ ಓಡಾಡುತ್ತಿದ್ದವರು ಮಳೆ ಆರಂಭವಾಗುತ್ತಿದ್ದಂತೆ ಪರದಾಡಿದರು. ವಾಹನ ಸವಾರರು ಕೂಡಾ ಆಕಸ್ಮಿಕ ಮಳೆಗೆ ಸಿಲುಕಿದರು.
ಇನ್ನು ಬೇಸಿಗೆ ಆರಂಭದಲ್ಲೇ ತಾಪಮಾನದ ಹೊಡೆತಕ್ಕೆ ಸುಸ್ತಾಗಿದ್ದ ಜನರಿಗೆ ಇಂದು ಸುರಿದ ಮಳೆ ಸಂತಸ ತಂದಿದೆ. ಮಳೆಯಿಂದ ವಾತಾವರಣ ತಂಪಾಗಿದ್ದು, ಜನರಲ್ಲಿ ಮಂದಹಾಸ ಮೂಡಿಸಿದೆ.