ವಿಜಯಸಾಕ್ಷಿ ಸುದ್ದಿ, ಉಡುಪಿ: ಶ್ರದ್ಧಾ ಸ್ವರ ಸಂಗೀತ ವೆಲ್ಫೇರ್ ಟ್ರಸ್ಟ್ ಗದಗ ಇದರ ನೃತ್ಯ ತಂಡವು ಉಡುಪಿಯಲ್ಲಿ ನಡೆದ ಸೀಸನ್–8 ರಾಕ್ ಇಂಡಿಯಾ ಆಲ್ ಇಂಡಿಯಾ ಡ್ಯಾನ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫಸ್ಟ್ ರನ್ನರ್-ಅಪ್ ಸ್ಥಾನವನ್ನು ಪಡೆದು ಸಾಧನೆ ಮಾಡಿದೆ.
ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ ಅನೇಕ ನೃತ್ಯ ತಂಡಗಳ ನಡುವೆ ನಡೆದ ತೀವ್ರ ಸ್ಪರ್ಧೆಯಲ್ಲಿ, ಟ್ರಸ್ಟ್‌ನ ನೃತ್ಯ ತಂಡವು ತನ್ನ ಶಿಸ್ತುಬದ್ಧ ಪ್ರದರ್ಶನ, ಉನ್ನತ ಕಲಾತ್ಮಕತೆ ಹಾಗೂ ನವೀನ ನೃತ್ಯ ಸಂಯೋಜನೆಯ ಮೂಲಕ ತೀರ್ಪುಗಾರರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.
ನೃತ್ಯ ನಿರ್ದೇಶಕರಾದ ಸಂತೋಷ ಅಸುಂಡಿ ಅವರ ನೇತೃತ್ವದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಸಂತೋಷ ಅಸುಂಡಿ, ಚಿರಂಜೀವಿ ಜಿಂದೇ, ವಿಕಾಸ್ ಶೆಟ್ಟಿ, ಶಬ್ದ ಕಲಾಲ ಹಾಗೂ ಪ್ರಕುಲ್ ಲಕ್ಕುಂಡಿ ಭಾಗವಹಿಸಿದ್ದರು.
ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಟ್ರಸ್ಟ್‌ನ ಅಧ್ಯಕ್ಷ ಉಜ್ವಲ್ ಡಿ.ಕಬಾಡಿ, ಸಂಸ್ಥೆಯ ಎಲ್ಲಾ ಸಿಬ್ಬಂದಿ, ಮಕ್ಕಳು ಹಾಗೂ ಪಾಲಕರೊಂದಿಗೆ ಸೇರಿ ನೃತ್ಯ ತಂಡದ ಎಲ್ಲಾ ಕಲಾವಿದರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.



