HomeArt and Literatureಗ್ರಾಮೀಣ ಆಸ್ಪತ್ರೆಯಲ್ಲಿ ಮೊದಲ ವಿಶೇಷ ಸೇವೆ

ಗ್ರಾಮೀಣ ಆಸ್ಪತ್ರೆಯಲ್ಲಿ ಮೊದಲ ವಿಶೇಷ ಸೇವೆ

For Dai;y Updates Join Our whatsapp Group

Spread the love

ಗದಗ ಜಿಲ್ಲೆಯ ಹುಲಕೋಟಿಯ ಕೆ.ಎಚ್. ಪಾಟೀಲ್ ಗ್ರಾಮೀಣ ಆಸ್ಪತ್ರೆ ನಾಲ್ಕು ಬಾರಿ ಯಶಸ್ವಿ ಮೂತ್ರಪಿಂಡ ಕಸಿ ಮಾಡಿದ ನಂತರ ದೇಶ ವಿದೇಶಗಳಲ್ಲಿ ಸದ್ದು ಮಾಡುತ್ತಿದೆ. ಯುನೈಟೆಡ್ ಕಿಂಗ್‌ಡಮ್ ಮತ್ತು ಯುಎಸ್‌ಎ ವೈದ್ಯರು ಇದೀಗ ಗದಗ ಗ್ರಾಮೀಣ ರೋಗಿಗಳೊಂದಿಗೆ ಉಚಿತವಾಗಿ ಸಮನ್ವಯ ಸಾಧಿಸಲು ಒಪ್ಪಿಕೊಂಡಿದ್ದಾರೆ ಮತ್ತು ಈಗ ರೋಗಿಗಳು ಗದಗ ಗ್ರಾಮದಲ್ಲಿ ವಿದೇಶಿ ವೈದ್ಯರಿಂದ ಉಚಿತ ಸಮಾಲೋಚನೆ ಮತ್ತು ಸಲಹೆಯನ್ನು ಪಡೆಯಬಹುದಾಗಿದೆ.

ಗದಗ ಸಮೀಪದ ಹುಲಕೋಟಿ ಗ್ರಾಮದಲ್ಲಿರುವ ಕೆ.ಎಚ್. ಪಾಟೀಲ್ ಗ್ರಾಮೀಣ ಆಸ್ಪತ್ರೆಯೊಂದಿಗೆ ದೀರ್ಘಾವಧಿಯ ಸಮನ್ವಯಕ್ಕೆ ವಿದೇಶಿ ಶಸ್ತçಚಿಕಿತ್ಸಕರು ಒಪ್ಪಿಗೆ ನೀಡಿದ್ದಾರೆ. ಅನೇಕ ಗ್ರಾಮೀಣ ರೋಗಿಗಳು ಮೂತ್ರಪಿಂಡ ಕಸಿ ಮಾಡಲು ದೊಡ್ಡ ನಗರಗಳು ಅಥವಾ ಪಟ್ಟಣಗಳಿಗೆ ಭೇಟಿ ನೀಡಿದರೆ ಲಕ್ಷ ಲಕ್ಷ ಬಿಲ್ ಹಾಗೂ ದುಬಾರಿ ಚಿಕಿತ್ಸೆಗಳು ಅವರನ್ನು ಭಯಭೀತಗೊಳಿಸುತ್ತವೆ. ಈಗ ಈ ಗ್ರಾಮೀಣ ಆಸ್ಪತ್ರೆಯು ಸಾಮಾನ್ಯ ಜನರಿಗೆ ಕೈಗೆಟುಕುವಂತಿದೆ. ಇದೇ ಮೊದಲ ಬಾರಿಗೆ ಗ್ರಾಮೀಣ ಆಸ್ಪತ್ರೆಯು ಅಂತಾರಾಷ್ಟ್ರೀಯ ವೈದ್ಯರಿಂದ ಉಚಿತ, ಅಮೂಲ್ಯವಾದ ಸಲಹೆ ಪಡೆಯುತ್ತಿದೆ. ಅದು ಗದಗ ಜಿಲ್ಲೆಯ ಹುಲಕೋಟಿ ಆಸ್ಪತ್ರೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.

ಹುಲಕೋಟಿ ಗ್ರಾಮದ ಗ್ರಾಮೀಣ ವೈದ್ಯಕೀಯ ಸೇವೆಗಳ ಕೆ.ಎಚ್. ಪಾಟೀಲ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಏಪ್ರಿಲ್ 24ರಂದು ಮೊದಲ ಯಶಸ್ವಿ ಮೂತ್ರಪಿಂಡ ಕಸಿ ಆಪರೇಷನ್ ನಡೆಯಿತು. ಈಗ ದಾನಿಗಳು ಮತ್ತು ಸ್ವೀಕರಿಸುವವರು ಇಬ್ಬರೂ ಆರೋಗ್ಯವಾಗಿದ್ದಾರೆ. ನಾಲ್ಕನೇ ಕಸಿ ಆಪರೇಷನ್ ಈ ತಂಡಕ್ಕೆ ಬಹಳ ವಿಶೇಷವಾಗಿತ್ತು. ಏಕೆಂದರೆ ಯುಕೆ ಲಿವರ್‌ಪೂಲ್‌ನ ಡಾ. ಅಜಯ್ ರಾವ್ ಹುಲಕೋಟಿ ವೈದ್ಯರ ತಂಡಕ್ಕೆ ಉಚಿತವಾಗಿ ಸಹಾಯ ಮಾಡಿದರು.

ಡಾ. ಅವಿನಾಶ್ ಓದುಗೌಡರ್ ಅವರು ಕನ್ಸಲ್ಟೆಂಟ್ ಮೂತ್ರಶಾಸ್ತçಜ್ಞರಾಗಿದ್ದು, ಅವರು ಕೆಎಂಸಿ ಮಣಿಪಾಲದಲ್ಲಿ ಮೂತ್ರಶಾಸ್ತçದಲ್ಲಿ ತರಬೇತಿಯನ್ನು ಪೂರೈಸಿದ್ದಾರೆ ಮತ್ತು ನಂತರ ಲಿವರ್‌ಪೂಲ್‌ನಿಂದ ಮೂತ್ರಪಿಂಡ ಕಸಿ ಮತ್ತು ಯುನೈಟೆಡ್ ಕಿಂಗ್‌ಡಂನ ಲೀಡ್ಸ್ನಿಂದ ಯುರೋ-ಆಂಕೊಲಾಜಿಗಾಗಿ ರೋಬೋಟಿಕ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆದರು. ಅವರು ತಮ್ಮ ಜನರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ತಮ್ಮ ಗ್ರಾಮವಾದ ಹುಲಕೋಟಿಗೆ ಮರಳಿದರು. ಮೂತ್ರಪಿಂಡ ಕಸಿಯು ಜನಸಾಮಾನ್ಯರಿಗೆ ಕೈಗೆಟುಕುವ ಹಾಗೆ ಮಾಡಬೇಕೆಂಬ ಹಂಬಲ ಇವರದು. ಡಾ. ದೀಪಕ್ ಕುರಹಟ್ಟಿ ಅವರು ಸಮಾಲೋಚಕ ನೆಫ್ರಾಲಜಿಸ್ಟ್ ಮತ್ತು ಕಸಿ ವೈದ್ಯರಾಗಿದ್ದಾರೆ, ಅವರು ಬೆಂಗಳೂರಿನ ಅಪೋಲೋ ಆಸ್ಪತ್ರೆಗಳಲ್ಲಿ ತಮ್ಮ ತರಬೇತಿಯನ್ನು ಪಡೆದಿದ್ದಾರೆ.

ತಂಡದಲ್ಲಿ ಡಾ. ಭುವನೇಶ ಆರಾಧ್ಯ, ಡಾ. ಪವನ್ ಕೋಳಿವಾಡ, ಡಾ. ಸಮೀರ್ ದೇಸಾಯಿ, ಡಾ. ಮೇಘನಾ ಹಿಪ್ಪರಗಿ, ಡಾ. ವಿಶಾಲ್ ಕೆ, ಡಾ. ವಿನಾಯಕ ಪಂಚಗಾರ ಇದ್ದಾರೆ. ಈ ಅಂತಾರಾಷ್ಟ್ರೀಯ ಮನ್ನಣೆಗೆ ಕಾರಣರಾದ ಎಲ್ಲಾ ವೈದ್ಯರಿಗೆ ಆಸ್ಪತ್ರೆಯ ಕಾರ್ಯದರ್ಶಿ ಡಾ.ವೇಮನ್ ಸಾಹುಕಾರ ಅಭಿನಂದನೆ ಸಲ್ಲಿಸಿದ್ದಾರೆ.

ಆರ್‌ಎಂಎಸ್‌ಎಸ್‌ನ ಅಧ್ಯಕ್ಷ ಡಾ. ಎಸ್.ಆರ್. ನಾಗನೂರ್ ಈ ಬಗ್ಗೆ ಮಾತನಾಡಿ, `ಈಗ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ (ಲಾಸ್ ಏಂಜಲೀಸ್) ಮತ್ತು ಯುಕೆ ಪರಿಣಿತ ವೈದ್ಯರು ಕಸಿಗೆ ಬರುವ ರೋಗಿಗಳಿಗೆ ಸಲಹೆ ನೀಡುತ್ತಿದ್ದಾರೆ. ಇದು ಕರ್ನಾಟಕದ ಗ್ರಾಮೀಣ ಆಸ್ಪತ್ರೆಯಲ್ಲಿ ಲಭ್ಯವಿರುವ ಮೊದಲ ವಿಶೇಷ ಸೇವೆಯಾಗಿದೆ’ ಎಂದಿದ್ದಾರೆ.

ಡಾ. ಪ್ಯಾರಾಅಲಿ ನೂರಾನಿ ಅವರು ಅಮೇರಿಕ ವೈದ್ಯರೊಂದಿಗೆ ಮಾತನಾಡಿ, ಹುಲಕೋಟಿ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಬಗ್ಗೆ ತಿಳಿಸಿದಾಗ ಅಲ್ಲಿಯ ವೈದ್ಯರೂ ಕೂಡ ಈ ಕಾರ್ಯದಲ್ಲಿ ಕೈಜೋಡಿಸಲು ಸಿದ್ಧರಾಗಿದ್ದು, ಹುಲಕೋಟಿ ಕೆ.ಎಚ್. ಪಾಟೀಲ್ ಸಂಶೋಧನಾ ಸಂಸ್ಥೆ ಹಾಗೂ ಆಸ್ಪತ್ರೆಗೆ ಮತ್ತೊಂದು ಗರಿ ಬಂದಂತಾಗಿದೆ.

– ಶ್ರೀಕಾಂತ ಕೊಪ್ಪರ.

ತೆರಿಗೆ ಸಲಹೆಗಾರರು, ಗದಗ.

ನಾಲ್ಕನೆಯ ಕಿಡ್ನಿ ಕಸಿಗೆ ದಾನ ಮಾಡಿದ ಎಪ್ಪತ್ತರ ವಯೋಮಾನದ ಮಹಿಳೆ `ಬೆಂಗಳೂರು ಅಥವಾ ಬೇರೆ ದೊಡ್ಡ ದೊಡ್ಡ ನಗರಗಳಲ್ಲಿ ಹೋದರೆ ಇರುವುದಕ್ಕೆ, ಊಟ-ತಿಂಡಿ ಹೀಗೆ ಆಪರೇಷನ್‌ಗಿಂತ ಇತರೆ ಖರ್ಚು-ವೆಚ್ಚಗಳೇ ಲಕ್ಷಗಳಷ್ಟಾಗುತ್ತವೆ. ಹೀಗಿರುವಾಗ ಗದುಗಿನ ಹತ್ತಿರದ ಹುಲಕೋಟಿಯಲ್ಲಿ ತಜ್ಞ ವೈದ್ಯರು ಇರುವುದರಿಂದ ನಮಗೆ ನಿಜವಾಗಲೂ ಉತ್ತಮ ಚಿಕಿತ್ಸೆ ಸಿಕ್ಕಿದ್ದು, ಈಗ ನಾನೂ ಚೆನ್ನಾಗಿದ್ದೇನೆ, ನನ್ನ ಮಗನೂ ಚೆನ್ನಾಗಿದ್ದಾನೆ’ ಎನ್ನುತ್ತಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!