ವಿಜಯಸಾಕ್ಷಿ ಸುದ್ದಿ, ಗದಗ : ರೈತರು ಕೃಷಿಯನ್ನು ಮಾತ್ರ ಅವಲಂಬಿಸದೇ ಪರ್ಯಾಯವಾಗಿ ಹೊಸ ತಂತ್ರಜ್ಞಾನಗಳ ಮೂಲಕ ಮೀನು ಕೃಷಿಯನ್ನು ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಮೀನು ಒಂದು ಉತ್ಕೃಷ್ಟ ಆಹಾರವಾಗಿದ್ದು ಪ್ರೋಟೀನ್ ಅಂಶ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
Advertisement
ನರಗುಂದ ತಾಲೂಕಿನಲ್ಲಿ ಇತ್ತೀಚೆಗೆ ಮೀನು ಕೃಷಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೀನುಗಾರಿಕೆ ಉಪನಿರ್ದೆಶಕ ಶರಣಪ್ಪ ಬಿರಾದಾರ ಸರ್ವರನ್ನು ಸ್ವಾಗತಿಸಿ ಇಲಾಖೆಯ ಯೋಜನೆಗಳ ಹಾಗೂ ತಂತ್ರಜ್ಞಾನದ ಬಗ್ಗೆ ಮಾಹಿತಿ ಒದಗಿಸಿದರು. ಮಂಡರಗಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ವಿನಾಯಕ ಬೇವಿನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಂಗಮ್ಮ ಬಸವರಾಜ ಹುಲಕುಂದ, ಚಂದ್ರಶೇಖರ ಕೋಟಿ, ಮಹೇಠ ಹಟ್ಟಿ, ಬಸವರಾಜ ಪವಾರ ಮತ್ತಿತರರು ಇದ್ದರು.