ಗಾಂಧಿನಗರ:- ಗುಜರಾತ್‌ನ ಅಹಮದಾಬಾದ್‌ನ ಬಾವ್ಲಾ ತಾಲೂಕಿನಲ್ಲಿ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
Advertisement
ವಿಪುಲ್ ಕಾಂಜಿ ವಾಘೇಲಾ (34), ಅವರ ಪತ್ನಿ ಸೋನಾಲ್ (26), ಮಕ್ಕಳಾದ ಕರೀನಾ ಅಲಿ ಸಿಮ್ರಾನ್ (11), ಮಯೂರ (5) ಮತ್ತು ರಾಜ್‌ಕುಮಾರ್ (8) ಮೃತರು. ಆರ್ಥಿಕ ಸಮಸ್ಯೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಕುಟುಂಬದವರು ಮೂಲತಃ ಧೋಲ್ಕಾದ ಬಾರ್ಕೋಥಾದ ದೇವಿಪೂಜಕ್ ವಾಸ್ ಪ್ರದೇಶದವರಾಗಿದ್ದು, ಸ್ವಲ್ಪ ಸಮಯ ಹಿಂದೆ ಬಾಗೋದ್ರಾಗೆ ಬಂದು ನೆಲೆಸಿದ್ದರು. ವಿಪುಲ್ ಅವರು ಆಟೋ ಓಡಿಸಿ, ಬಂದ ಹಣದಲ್ಲಿ ಜೀವನವನ್ನು ಸಾಗಿಸುತ್ತಿದ್ದರು. ವಿಫುಲ್, ಶನಿವಾರ ತಡರಾತ್ರಿ ಮೂವರು ಮಕ್ಕಳು ಹಾಗೂ ಪತ್ನಿಯೊಂದಿಗೆ ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.