ಕಾರವಾರ: ಶಿರಸಿಯ ಸಹಸ್ರಲಿಂಗದಲ್ಲಿ ಈಜಲು ಹೋಗಿದ್ದ ಐವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರೋ ಘಟನೆ ನಡೆದಿದೆ. ರವಿವಾರ ರಜೆಯ ಸಲುವಾಗಿ ಈಜಲು ತೆರಳಿದ್ದ ವಿದ್ಯಾರ್ಥಿಗಳು ನೀರಲ್ಲಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಓರ್ವನ ಶವ ಪತ್ತೆಯಾಗಿದೆ. ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ರಾಮನಬೈಲಿನ ನಾದಿಯಾ ನೂರ್ ಅಹಮದ್ ಶೇಖ್ (20),
ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಟಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್(22) ಹಾಗೂ ರಾಮನಬೈಲಿನ ವಿದ್ಯಾರ್ಥಿ ಉಮರ್ ಸಿದ್ದಿಕ್ ನಾಪತ್ತೆಯಾಗಿದ್ದಾರೆ. ಇದ್ರಲ್ಲಿ ಸಲೀಮ್ ಕಲೀಲ್ ರೆಹಮಾನ್ (44) ಮೃತ ವ್ಯಕ್ತಿಯ ಶವ ಪತ್ತೆಯಾಗಿದೆ. ಉಳಿದವರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗ್ತಿದೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.