ಬೆಂಗಳೂರು:- ಲಾಂಗ್ ಹಿಡಿದು ಕಾರಿನ ಗ್ಲಾಸ್ ಒಡೆದು ಅಟ್ಟಹಾಸ ಮೆರೆದ ಐವರು ಪುಂಡರನ್ನು ಪೋಲೀಸರು ಅರೆಸ್ಟ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಜರುಗಿದೆ.
ಲಿಖಿತ್ , ಜಯಂತ್ ಸೇರಿ ಐವರನ್ನು ಬಂಧಿಸಲಾಗಿದೆ. ಆರೋಪಿಗಳು, ತಮ್ಮ ಏರಿಯಾದಲ್ಲಿ ಆರೋಪಿಗಳಿಗೆ ಸಾರ್ವಜನಿಕರೊಬ್ಬರು ತಡೆದು ಬುದ್ಧಿ ಹೇಳಿದ್ದರು. ಅಷ್ಟಕ್ಕೇ ಕೋಪಗೊಂಡಿದ್ದ ಆರೋಪಿಗಳು ತಡರಾತ್ರಿ ನಿಲ್ಲಿಸಿದ್ದ ಕಾರಿನ ಮೇಲೆ ಲಾಂಗ್‌ನಿಂದ ಗ್ಲಾಸ್ ಒಡೆದಿದ್ದರು. ಫೀಲ್ಡ್‌ನಲ್ಲಿ ಹೆಸರು ಮಾಡಲು ಕೃತ್ಯ ಎಸಗಿರುವುದಾಗಿ ಕೇಳಿಬಂದಿದೆ.
ಬ್ಯಾಡರಹಳ್ಳಿಯ ವಾಲ್ಮೀಕಿನಗರ ಮತ್ತು ಎಪಿನಗರದ ಮುದ್ದಯ್ಯನಪಾಳ್ಯದಲ್ಲಿ ಕಾರ್ ಗ್ಲಾಸ್ ಒಡೆದಿದ್ದ ಈ ಗ್ಯಾಂಗ್ ಬಳಿಕ ಮಾದನಾಯಕನಹಳ್ಳಿಯ ಮಾಗಡಿ ರೋಡ್ ಲಿಮಿಟ್ಸ್‌ನಲ್ಲಿ ಚಾಲಕನ ಮೇಲೆ ಲಾಂಗ್ ಬೀಸಿತ್ತು. ಲಾರಿ ಗ್ಲಾಸ್ ಒಡೆದು, ಚಾಲಕ ಮಲಗಿರೋದನ್ನ ಗಮನಿಸಿ ಹಣಕ್ಕಾಗಿ ಬೆದರಿಕೆ ಹಾಕಿತ್ತು. ಹಣ ತೆಗೆದುಕೊಡುವಷ್ಟರಲ್ಲಿ ಲಾಂಗ್ ಬೀಸಿ ಕೈ ಕೂಡ ಕಟ್ ಮಾಡಿತ್ತು. ಬಳಿಕ ಮೊಬೈಲ್ ಹಾಗೂ 5 ಸಾವಿರ ರೂ. ಹಣ ದೋಚಿ ಪರಾರಿ ಆಗಿದ್ದರು.
ಈ ಸಂಬಂಧ ಆರೋಪಿಗಳ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ 16, ಎಪಿ ನಗರದಲ್ಲಿ 6, ಮಾದನಾಯಕನ ಹಳ್ಳಿಯಲ್ಲಿ 3, ದೊಡ್ಡ ಬಳ್ಳಾಪುರದಲ್ಲಿ 3 ಕೇಸ್‌ಗಳು ಸೇರಿ ಒಟ್ಟು 28 ಪ್ರಕರಣಗಳು ಆರೋಪಿಗಳ ವಿರುದ್ಧ ದಾಖಲಾಗಿದ್ದವು. ತನಿಖೆ ಕೈಗೊಂಡಿದ್ದ ಪೊಲೀಸರು ಸೊಂಡೆಕೊಪ್ಪದಲ್ಲಿ ಐವರನ್ನು ಬಂಧಿಸಿದ್ದಾರೆ.