ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ 79ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಗದಗ ಜಿಲ್ಲಾಧ್ಯಾಕ್ಷ ತೋಟಪ್ಪ (ರಾಜು) ಕುರುಡಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಬಲಿದಾನಗೈದಿದ್ದಾರೆ. ಅಂತಹ ಮಹನೀಯರಿಂದಲೇ ನಮಗೆಲ್ಲ ಸ್ವಾತಂತ್ರ್ಯ ಸಿಕ್ಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಮಾತನಾಡಿ, ವಿಶ್ವದಲ್ಲಿ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಭಾರತ ಇಂದು 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್. ಕರೀಗೌಡ್ರ, ವಕ್ತಾರರಾದ ಎಂ.ಎಂ. ಹಿರೇಮಠ, ಪ್ರಮುಖರಾದ ಸಂಗಮೇಶ ದುಂದೂರ, ಜಗನ್ನಾಥಸಾ ಭಾಂಡಗೆ, ಶ್ರೀಪತಿ ಉಡುಪಿ, ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಅಶೋಕ ಸಂಕಣ್ಣವರ, ಅನಿಲ ಅಬ್ಬಿಗೇರಿ, ಕೆ.ಪಿ. ಕೋಟಿಗೌಡ್ರ, ಶಶಿಧರ ದಿಂಡೂರ, ರಮೇಶ ಸಜ್ಜಗಾರ, ಶಾರದಾ ಸಜ್ಜನ, ನಿರ್ಮಲಾ ಕೊಳ್ಳಿ, ವಿಜಯಲಕ್ಷ್ಮೀ ಮಾನ್ವಿ, ಅಮರನಾಥ ಬೆಟಗೇರಿ, ಶಂಕರ ಕರಿಬಿಷ್ಠಿ, ಮಂಜುನಾಥ ಶಾಂತಗೇರಿ, ಪಾರ್ವತಿ ಪಟ್ಟಣಶೆಟ್ಟಿ, ಪುಷ್ಪಾ ಪೂಜಾರ, ಅಕ್ಕಮ್ಮ ವಸ್ತ್ರದ, ಸುಮಂಗಲಾ ಕೊನೆವಾಲ, ರವಿ ಮಾನ್ವಿ, ರಾಜು ಹೊಂಗಲ, ಸುಜಯ ಗಲಗಲಿ, ವಾಸು ಹುಯಿಲಗೋಳ, ಮಂಜುನಾಥ, ವಿನೋದ ಹಂಸನೂರ ಮುಂತಾದವರಿದ್ದರು.