ವಿಜಯಸಾಕ್ಷಿ ಸುದ್ದಿ, ಗದಗ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದಿಂದ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಗದಗ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ರಾಮಪ್ಪ ಬೇಲೂರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಾಡಿನ ಸೇವೆಗಾಗಿ ಯುವಕರು ಮುಂದಾಗಬೇಕೆಂದು ಹೇಳಿದರು.
Advertisement
ರಾಜ್ಯ ಸಮಿತಿಯ ಸದಸ್ಯರಾದ ದಾವಲಸಾಬ ಮುಳಗುಂದ, ಕರವೇ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ತಿಮ್ಮಣ್ಣ ಈರಪ್ಪ ಡೋಣಿ ಮಾತನಾಡಿದರು. ಗದಗ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಭಂಡಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಹದೇವ ಕೋಟಿ, ಗದಗ ತಾಲೂಕಾಧ್ಯಕ್ಷ ಹನುಮಂತಸಾ ಸಿದ್ದಲಿಂಗ, ಯುವ ಘಟಕದ ಅಧ್ಯಕ್ಷ ಮಣಿಕಂಠ ಭಂಡಾರಿ, ಜಿಲ್ಲಾ ಮುಖಂಡರಾದ ಮೈಲಾರಪ್ಪ ಕೋಟೆಪ್ಪನವರ, ಮಂಜುನಾಥ್ ಶಾಂತಗೇರಿ, ಮಂಜುನಾಥ್ ಬಾಗಿ, ಶಂಕರ ದಹಿಂಡಿ ಸೇರಿದಂತೆ ಪದಾಧಿಕಾರಿಗಳಿದ್ದರು.