HomeGadag Newsವೀರ ಯೋಧರನ್ನು ಸ್ಮರಿಸೋಣ

ವೀರ ಯೋಧರನ್ನು ಸ್ಮರಿಸೋಣ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ದೇಶದ ಘನತೆ, ಸಾಹಸವನ್ನು ಎತ್ತಿ ಹಿಡಿದಿದ್ದರು. ಇವರ ತ್ಯಾಗ, ಬಲಿದಾನ, ದೇಶಪ್ರೇಮ ಎಲ್ಲಾ ಭಾರತೀಯರಿಗೂ ದಾರಿದೀಪ. ಸೈನಿಕರನ್ನು ದೇಶದ ಪ್ರತಿಯೊಬ್ಬರೂ ಸ್ಮರಿಸಿಕೊಳ್ಳಬೇಕು ಎಂದು ಬಿಜೆಪಿ ಶಿರಹಟ್ಟಿ ಮಂಡಳದ ಪ್ರಧಾನ ಕಾರ್ಯದರ್ಶಿ ಅನಿಲ ಮುಳಗುಂದ, ಮಾಜಿ ಪ್ರ.ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ ಹೇಳಿದರು.

ಅವರು ಬಿಜೆಪಿ ಶಿರಹಟ್ಟಿ ಮಂಡಳ ಯುವ ಮೋರ್ಚಾ ಹಾಗೂ ನಗರ ಘಟಕದಿಂದ ಕಾರ್ಗಿಲ್ ವಿಜಯೋತ್ಸವದ ನಿಮಿತ್ತ ಪಟ್ಟಣದಲ್ಲಿ ಗುರುವಾರ ಸಂಜೆ ಪಂಜಿನ ಮೆರವಣಿಗೆಯ ಬಳಿಕ ವೀರ ಯೋಧರನ್ನು ಸ್ಮರಿಸಿ ಮಾತನಾಡಿದರು.

2 ತಿಂಗಳು ನಡೆದ ಯುದ್ಧದಲ್ಲಿ 490 ಭಾರತೀಯ ಯೋಧರು ವೀರ ಮರಣ ಹೊಂದಿದರು. 1999ರ ಜುಲೈ 26ರಂದು ‘ಟೈಗರ್ ಹಿಲ್’ ಅನ್ನು ವಶಪಡಿಸಿಕೊಳ್ಳುವುದರೊಂದಿಗೆ ಭಾರತ ವಿಜಯ ಗಳಿಸಿತು. ಈ ಯುದ್ಧದಲ್ಲಿ ಭಾರತ ತನ್ನ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಬಲಿಷ್ಠವಾಗಿದೆ ಎಂಬ ದೇಶ ಪ್ರೇಮವನ್ನು ಜಗತ್ತಿಗೆ ತೋರಿಸಿತ್ತು. ತಾಯಿ ನೆಲ ಸಂಕಷ್ಟದಲ್ಲಿದ್ದಾಗ ಸಾವಿಗೂ ಅಂಜದೆ ಹೋರಾಡಿದ ಯೋಧರನ್ನು ಸ್ಮರಿಸೋಣ. ದೇಶಕ್ಕಾಗಿ ಪ್ರಾಣಾರ್ಪಣೆಗೈದ ಕೆಚ್ಚೆದೆಯ ವೀರರ ತ್ಯಾಗ ಎಂದಿಗೂ ಅಮರ ಎಂದರು.

ಮೆರವಣಿಗೆಯು ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದಿಂದ ಮುಖ್ಯ ಬಜಾರ ಮುಖಾಂತರ ಸಾಗಿ ಸರಕಾರಿ ಆಸ್ಪತ್ರೆ ಸರ್ಕಲ್‌ನಲ್ಲಿ ಸಂಪನ್ನಗೊಂಡಿತು. ಈ ವೇಳೆ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಈರಣ್ಣ ಪೂಜಾರ, ಬಸವರಾಜ ಮೆಣಸಿನಕಾ¬, ಜೆಡಿಎಸ್ ತಾಲೂಕಾಧ್ಯಕ್ಷ ಪ್ರವೀಣ ಬಾಳಿಕಾಯಿ, ಬಸವರಾಜ ಕಲ್ಲೂರ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಗಜಾಕೋಶ, ದುಂಡೆಶ ಕೊಟಗಿ, ರಾಜಶೇಖರ ಶಿಗ್ಲಿಮಠ, ಮಹಾಂತೇಶ ಮಣಕವಾಡ, ಸಂತೋಷ ಜಾವೂರ, ಆಕಾಶ ಸೌದತ್ತಿ, ನವೀನ ಕುಂಬಾರ, ಮಂಜಯ್ಯ ಕಲಕೇರಿಮಠ, ಮಂಜುನಾಥ ಗೊರವರ, ಹನುಮಂತ ರಾಮಗೇರಿ, ಕಿರಣ ಚಿಲ್ಲೂರಮಠ, ಆದೇಶ ಸವಣೂರ, ಮಲ್ಲಿಕಾರ್ಜುನ ಹಾಳದೋಟದ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!