ಬೆಂಗಳೂರಿನಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಸಂಪೂರ್ಣ ಬ್ಯಾನ್: ಕಮಿಷನರ್ ದಯಾನಂದ್ ಸ್ಪಷ್ಟನೆ!

0
Spread the love

ಬೆಂಗಳೂರು:– ನಗರದಲ್ಲಿ ಇತ್ತೀಚೆಗೆ ತಲೆ ಎತ್ತಿರುವ ಫ್ಲೆಕ್ಸ್ ಮತ್ತು ಬ್ಯಾನರ್ ಸಂಪೂರ್ಣ ಬ್ಯಾನ್ ಮಾಡಲಾಗಿದೆ ಎಂದು ಕಮಿಷನರ್ ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.

Advertisement

ಈ ಕುರಿತು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಜೊತೆ ಸಭೆ ನಡೆಸಿ ಮಾತನಾಡಿದ ಪೊಲೀಸ್ ಕಮಿಷನರ್, ‘ಫ್ಲೆಕ್ಸ್, ಬ್ಯಾನರ್​ಗಳ ಅಳವಡಿಕೆ ವಿರುದ್ಧ ಯಾವ ರೀತಿ ಕಾರ್ಯಾಚರಣೆ ಮಾಡಬೇಕೆಂಬ ನಿರ್ಧಾರ ಮಾಡಲಾಗಿದೆ. ಅಕ್ರಮ ಚಟುವಟಿಕೆಗಳ ಮಟ್ಟಹಾಕಲು ಚರ್ಚೆ ಮಾಡಲಾಗಿದೆ ಎಂದರು.

ಅನಧೀಕೃತ ಬ್ಯಾನರ್​ಗಳ ತೆರವಿಗೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯಿಂದ ಜಂಟಿ ಕಾರ್ಯಚರಣೆ ನಡೆಸಲಿದ್ದು, ಬ್ಯಾನರ್​, ಫ್ಲೆಕ್ಸ್, ಹೋಲ್ಡಿಂಗ್ಸ್​ಗಳನ್ನು ಪೊಲೀಸರು​ ತೆರೆವುಗೊಳಿಸಲಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ‘ಬ್ಯಾನರ್​, ಫ್ಲೆಕ್ಸ್, ಹೋಲ್ಡಿಂಗ್ಸ್​ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡಲಿದ್ದು, ದೂರು ಬಂದ ತಕ್ಷಣವೇ ಪೊಲೀಸರು, ಬ್ಯಾನರ್​, ಫ್ಲೆಕ್ಸ್, ಹೋಲ್ಡಿಂಗ್ಸ್​ ತೆರವು ಕಾರ್ಯ ನಡೆಸಲಿದ್ದಾರೆ.

ಇನ್ನು ಸಭೆಯಲ್ಲಿ ಎರಡು ಅಂಶಗಳ ಮಹತ್ವದ ಚರ್ಚೆಯಾಗಿದೆ. ಮೊದಲನೆದಾಗಿ ಎಲ್ಲೆಲ್ಲಿ ಅನಧಿಕೃತ ಫ್ಲೆಕ್ಸ್ ಹಾಕಲಾಗಿದೆ, ಅವುಗಳ ತೆರವು ಹಾಗೂ ಕ್ರಮಕೈಗೊಳ್ಳುವುದು. ಹಾಗೂ ಪ್ರಮುಖವಾಗಿ ಯಾವ ಯಾವ ಕಾನೂನು ಕ್ರಮ ಕೈಗೊಳ್ಳಬಹುದು. ಅವೆಲ್ಲವನ್ನೂ ಬಳಸಿ ಕ್ರಮ ಕೈಗೊಳ್ಳಲಾಗುತ್ತದೆ. ಎರಡನೇದಾಗಿ ಈ ರೀತಿ ಫ್ಲೆಕ್ಸ್ ಗಳ ಹಾಕದಂತೆ ನಿಗಾ ವಹಿಸುವುದು. ರಾತ್ರಿ ಗಸ್ತಿನಲ್ಲಿರುವ ಸಿಬ್ಬಂದಿಗಳಿಗೂ ಸಹ ಸೂಚನೆ ನೀಡಲಾಗಿದೆ.

ಫ್ಲೆಕ್ಸ್ ಹಾಕುವ ವೇಳೆ ಅದನ್ನು ಪೂರ್ವ ನಿರ್ಧರಿತ ನಂಬರ್​ಗೆ ಮಾಹಿತಿ ನೀಡುವುದು. ಅವುಗಳ ಮೇಲೆ ಎಫೆಕ್ಟಿವ್ ಆಕ್ಷನ್ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here