ಗೃಹ ಸಚಿವರ ಮನೆ ಮುಂದೆ ರಾರಾಜಿಸುತ್ತಿವೆ ಫ್ಲೆಕ್ಸ್, ಬ್ಯಾನರ್ಸ್: ಹೈಕೋರ್ಟ್ ಆದೇಶಕ್ಕೂ ಡೋಂಟ್ ಕೇರ್!

0
Spread the love

ಬೆಂಗಳೂರು:- ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಮನೆ ಮುಂದೆಯೇ ಹುಟ್ಟಹಬ್ಬದ ಫ್ಲೆಕ್ಸ್, ಬ್ಯಾನರ್ ರಾರಾಜಿಸುತ್ತಿದೆ.

Advertisement

ಗೃಹ ಸಚಿವ ಪರಮೇಶ್ವರ್ ಅವರ ಬರ್ತ್ ಡೇ ಹಿನ್ನೆಲೆ ಸದಾಶಿವನಗರದ ನಿವಾಸದ ಸುತ್ತಮುತ್ತ ಫ್ಲೆಕ್ಸ, ಬ್ಯಾನರ್ ಹಾಕಲಾಗಿದೆ. ಅತ್ತ ಫ್ಲೆಕ್ಸ್ ಕಂಟ್ರೋಲ್ ಗೆ ರಾತ್ರಿ ವೇಳೆ ಗಸ್ತು ತಿರುಗಲು ಪಾಲಿಕೆ ಜೊತೆ ಖಾಕಿ ಪಡೆ ಕೈ ಜೋಡಿಸಿತ್ತು. ಆದರೆ ಇದೀಗ ಅದೇ ಪೊಲೀಸ್ ಇಲಾಖೆ ನಿರ್ವಹಿಸುವ ಗೃಹ ಸಚಿವರಿಂದಲೇ ರೂಲ್ಸ್ ಬ್ರೇಕ್ ಆಗಿದೆ. ರಾಜಕಾರಣಿಗಳಿಗೆ ಒಂದು ನ್ಯಾಯ, ಜನರಿಗೆ ಮತ್ತೊಂದು ನ್ಯಾಯನಾ? ಎಂದು ಜನಪ್ರತಿನಿಧಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಹಲವು ಕ್ರಮಗಳನ್ನು ಕೈಗೊಂಡ ಬಿಬಿಎಂಪಿಗೆ ರಾತ್ರಿ ವೇಳೆ ರಸ್ತೆಗಳಲ್ಲಿ ಉದ್ಭವವಾಗೊ ಅನಧಿಕೃತ ಫ್ಲೆಕ್ಸ್ ತಲೆ ಬಿಸಿ ತಂದಿತ್ತು. ಮೊದಲಿನಿಂದಲೂ ಈ ರೀತಿ ಬ್ಯಾನರ್ ಹಾಕುವವರ ವಿರುದ್ಧ ಕ್ರಮಕೈಗೊಂಡರು, ಮತ್ತೆ ಮತ್ತೆ ಈ ರೀತಿ ಚಟುವಟಿಕೆ ಹೆಚ್ಚಾಗಿದ್ದು, ಹೈ ಕೊರ್ಟ್ ನ ನಿರ್ದೇಶನದ ಮೇರೆಗೆ ಬಿಬಿಎಂಪಿ, ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆಗೆ ಮುಂದಾಗಿತ್ತು. ಇತ್ತೀಚೆಗೆ ಬೆಂಗಳೂರು ಪೊಲೀಸರ ಜೊತೆ ಮಹತ್ವದ ಸಭೆ ನಡೆಸಿ, ಈಗಾಗಲೇ ಹಾಕಿರುವ ಅನಧಿಕೃತ ಬ್ಯಾನರ್ ಹಾಗೂ ಅನಧಿಕೃತ ಫ್ಲೆಕ್ಸ್ ಗಳ ವಿರುದ್ಧ ಹಾಗೂ ಅನಧಿಕೃತ ಫ್ಲೆಕ್ಸ್ ಗಳ ಹಾಕುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ನಿರ್ಧಾರ ಹಾಗೂ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗಿತ್ತು.

ಆದರೆ ಈಗ ರೂಲ್ಸ್ ಮಾಡಿದವರಿಂದಲೇ ರೂಲ್ಸ್ ಬ್ರೇಕ್ ಆಗಿದ್ದು ಆಕ್ರೋಶ ವ್ಯಕ್ತವಾಗಿದೆ. ಎಷ್ಟೇ ಕಠಿಣ ಕ್ರಮ ಜಾರಿಗೆ ತಂದರೂ, ಫ್ಲೆಕ್ಸ್, ಬ್ಯಾನರ್ ಹಾವಳಿಗೆ ಕಡಿವಾಣ ಬೀಳದೆ ಇರುವುದು ಬೇಸರದ ಸಂಗತಿ.


Spread the love

LEAVE A REPLY

Please enter your comment!
Please enter your name here