ನವದೆಹಲಿ:- ತರಬೇತಿ ಪಡೆಯದ ಪೈಲಟ್ ಗಳಿಂದ ವಿಮಾನ ಹಾರಾಟ ಹಿನ್ನೆಲೆ, ಏರ್ ಇಂಡಿಯಾಗೆ ಬರೋಬ್ಬರಿ 90 ಲಕ್ಷ ದಂಡ ವಿಧಿಸಲಾಗಿದೆ.
ಅರ್ಹತೆ ಹೊಂದಿರದ ಸಿಬ್ಬಂದಿಯೊಂದಿಗೆ ವಿಮಾನಗಳನ್ನು ನಿರ್ವಹಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲ ದಂಡ ವಿಧಿಸಿದೆ. ಜತೆಗೆ ಏರ್ ಇಂಡಿಯಾದ ನಿರ್ದೇಶಕರ ಕಾರ್ಯಾಚರಣೆ ಮತ್ತು ನಿರ್ದೇಶಕರ ತರಬೇತಿ ಸಂಸ್ಥೆಗೂ ನಾಗರಿಕ ವಿಮಾನಯಾನ ನಿಯಂತ್ರಕ ಕ್ರಮವಾಗಿ 6 ಲಕ್ಷ ರೂ. ಮತ್ತು 3 ಲಕ್ಷ ರೂ. ದಂಡ ವಿಧಿಸಿದೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಪೈಲಟ್‌ಗೆ ಸೂಚಿಸಲಾಗಿದೆ ಎಂದು ಡಿಜಿಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಏರ್ ಇಂಡಿಯಾ ವಿಮಾನ ತರಬೇತಿ ಹೊಂದಿರದ ಲೈನ್ ಕ್ಯಾಪ್ಟನ್ ಮತ್ತು ನಾನ್-ಲೈನ್-ರಿಲೀಸ್ಡ್ ಫಸ್ಟ್ ಆಫೀಸರ್‌ಗಳೊಂದಿಗೆ ಕಾರ್ಯ ನಿರ್ವಹಿಸಿದೆ. ಇದು ಸ್ಪಷ್ಟವಾದ ಸುರಕ್ಷತಾ ಮಾನದಂಡದ ಉಲ್ಲಂಘನೆ ಎನ್ನುವುದು ಗಮನಕ್ಕೆ ಬಂದಿದೆ. ಹೀಗಾಗಿ ದಂಡ ವಿಧಿಸಲಾಗಿದೆʼʼ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿವರಿಸಿದೆ.


