ವಿಜಯಸಾಕ್ಷಿ ಸುದ್ದಿ, ರೋಣ : ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶವನ್ನು ಮಾರ್ಚ್ ೨ರಂದು ರೋಣ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು, ಸಮಾವೇಶ ನಡೆಯಲಿರುವ ಸ್ಥಳದ ಬಳಿಯೇ ಹೆಜ್ಜೇನು ಗೂಡು ಕಟ್ಟಿದ್ದು ಅಧಿಕಾರಿಗಳು ಮಾತ್ರ ಚಿತ್ತ ಹರಿಸಿಲ್ಲ.
ಸಮಾವೇಶದ ಸ್ಥಳ ತಹಸೀಲ್ದಾರ್ ಕಚೇರಿಯ ಹಿಂಭಾಗದಲ್ಲಿದೆ. ಅಲ್ಲದೆ ತಹಸೀಲ್ದಾರ್ ಕಚೇರಿಯ ಕಟ್ಟಡದಲ್ಲಿಯೇ ಹೆಜ್ಜೇನು ಗೂಡು ಕಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಹೆಜ್ಜೇನು ದಾಳಿ ನಡೆಸಿ ಹತ್ತುಕ್ಕೂ ಜನರು ಆಸ್ಪತ್ರೆ ಸೇರಿದ್ದರು. ಈಗ ಅದೇ ಸ್ಥಳದಲ್ಲಿ ಮತ್ತೆ ಹೆಜ್ಜೇನು ಗೂಡು ಕಟ್ಟಿದೆ.
ಗ್ಯಾರಂಟಿ ಸಮಾವೇಶಕ್ಕೆ ಎರಡೂ ತಾಲೂಕುಗಳಿಂದ ಸಾವಿರಾರು ಫಲಾನುಭವಿಗಳು ಆಗಮಿಸುವ ಹಿನ್ನೆಲೆಯಲ್ಲಿ ತಾಲೂಕಾಡಳಿತ ಈ ಬಗ್ಗೆ ಎಚ್ಚರಿಕೆ ವಹಿಸಿ, ಹೆಜ್ಜೇನು ಸ್ಥಳಾಂತರಿಸಲು ಅಧಿಕಾರಿಗಳು ಮುಂದಾಗಬೇಕಿದೆ.
ಹೆಜ್ಜೇನು ಗೂಡಿನತ್ತ ಗಮನಹರಿಸಿ
Advertisement