ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮೀಪದ ಗೋವನಾಳ ಗ್ರಾ.ಪಂ ವತಿಯಂದ ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಯಂತ್ರದ ಮೂಲಕ ಔಷಧಿ ಸಿಂಪರಣೆ ಕಾರ್ಯವನ್ನು ಕೈಗೊಂಡಿದ್ದು, ಗೋವನಾಳ ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ಗುಲಗೊಂಜಿಕೊಪ್ಪ, ಒಡೆಯರಮಲ್ಲಾಪುರ ಗ್ರಾಮಗಳಲ್ಲಿ ಫಾಗಿಂಗ್ ಕಾರ್ಯಕ್ರಮಕ್ಕೆ ಅಧ್ಯಕ್ಷ ಮಂಜನಗೌಡ ಕೆಂಚನಗೌಡ್ರ ಮತ್ತು ಸದಸ್ಯ ಪದ್ಮರಾಜ ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೊಳ್ಳೆಗಳನ್ನು ಅಲಕ್ಷಿಸಿದರೆ ಡೆಂಘೀ ಜ್ವರದಂತಹ ಪ್ರಾಣಾಂತಿಕ ಕಾಯಿಲೆಗಳು ಬರಬಹುದು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಫಾಗಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಸ್ವಚ್ಛತೆ, ನೈರ್ಮಲ್ಯದ ಕುರಿತಾಗಿ ಜಾಗ್ರತಿ ವಹಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಬೇಕು. ಡೆಂಘೀ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸದಸ್ಯರಾದ ಕರಿಯಪ್ಪಗೌಡ ಹೊಸಗೌಡ್ರ, ಅಣ್ಣಪ್ಪ ರಾಮಗೇರಿ, ಗೊವನಾಳ ಗ್ರಾಮದ ಹಿರಿಯರಾದ ಭರಮಣ್ಣ ರೊಟ್ಟಿಗವಾಡ, ನಿಂಗನಗೌಡ ಮರಲಿಂಗನಗೌಡ್ರ, ಬಸವರಾಜ ಮಲ್ಲೂರು, ನಿಂಗನಗೌಡ ಮನಕಟ್ಟಿ, ಚಂದ್ರು ತಳವಾರ, ಗಂಗಾಧರ ಮಾದರ, ಗ್ರಾ.ಪಂ ಸಿಬ್ಬಂದಿಗಳು ಇದ್ದರು.