ಜನಪದ ಗಾನ ಕೋಗಿಲೆ ಸುಕ್ರಿ ಬೊಮ್ಮಗೌಡ ವಿಧಿವಶ!

0
Spread the love

ಕಾರವಾರ:- ಜನಪದ ಗಾನ ಕೋಗಿಲೆ 91 ವರ್ಷದ ಸುಕ್ರಿ ಬೊಮ್ಮಗೌಡ ನಿಧನರಾಗಿದ್ದಾರೆ.

Advertisement

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಡಿಗೇರಿಯ ಸುಕ್ರಿ ಬೊಮ್ಮಗೌಡ ವಯೋಸಹಜ ಕಾಯಿಲೆಯಿಂದಾಗಿ ಇಂದು ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ.

ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ಇವರು ವಿದ್ಯಭ್ಯಾಸ ಮಾಡದಿದ್ದರೂ ಹಾಲಕ್ಕಿ ಜನಾಂಗದ ಜನಪದ ಹಾಡುಗಳನ್ನು ಹಾಡುವ ಮೂಲಕ ಹಳ್ಳಿ ಸೊಗಡನ್ನ ದಿಲ್ಲಿಗೆ ಕೊಂಡೊಯ್ದ ಕೀರ್ತಿ ಹೊಂದಿದ್ದಾರೆ. ಇದಲ್ಲದೇ ಮದ್ಯ ಮುಕ್ತ ಗ್ರಾಮ ಮಾಡುವ ಹೋರಾಟದಲ್ಲಿ ಭಾಗಿಯಾದ ಇವರು ತಮ್ಮ ಊರನ್ನು ಮದ್ಯ ಮುಕ್ತ ಗ್ರಾಮವನ್ನಾಗಿಸಿದರು. 2017 ರಲ್ಲಿ ಇವರ ಜನಪದ ಹಾಡಿನ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.


Spread the love

LEAVE A REPLY

Please enter your comment!
Please enter your name here