ವಿಜಯಸಾಕ್ಷಿ ಸುದ್ದಿ, ಮುಳಗುಂದ: ಶರಣರು ನೆಲೆಸಿದ ಕ್ಷೇತ್ರವು ಪಾವನ ಕ್ಷೇತ್ರವಾಗುವುದು ಎಂದು ತುಪ್ಪದ ಕುರಹಟ್ಟಿಯ ವಾಗೀಶ ಪಂಡಿತ ಶಿವಾಚಾರ್ಯ ಮಾಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣ ಸಮೀಪದ ಹೊಸಳ್ಳಿ ಬೂದೀಶ್ವರ ಮಠದ ಆವರಣದಲ್ಲಿ ಬೂದೀಶ್ವರ ಪವಾಡ ಕಲಾಪ್ರತಿಮೆ ಲೋಕಾರ್ಪಣೆ ನೆರೆವೇರಿಸಿ ಮಾತನಾಡಿ, ಬೂದೀಶ್ವರ ಸ್ವಾಮಿಗಳು ಹಲವಾರು ಪವಾಡಗಳನ್ನು ಮಾಡುತ್ತಾ ಹೊಸಳ್ಳಿ ಬೂದೀಶ್ವರ ತಪೋ ಭೂಮಿಯಲ್ಲಿ ನೆಲೆಸಿದರು. ಈ ಪುಣ್ಯ ಭೂಮಿಯನ್ನು ಮತ್ತಷ್ಟು ಪಾವನಗೊಳಿಸಲು ಅಭಿನವ ಬೂದೀಶ್ವರ ಮಾಹಾಸ್ವಾಮಿಗಳು ಶಿಕ್ಷಣ ಕ್ರಾಂತಿ ಹಾಗೂ ಧರ್ಮ ಕ್ರಾಂತಿ ನೆರವೇರಿಸುತ್ತಿರುವುದು ಶ್ಲಾಘನೀಯ. ಇಂತಹ ಸಂತರು, ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವುದರಿಂದ ಪ್ರತಿಯೊಬ್ಬರ ಜೀವನ ಪಾವನವಾಗುತ್ತದೆ ಎಂದರು.
ಸಾನ್ನಿಧ್ಯವನ್ನು ಅಭಿನವ ಬೂದೀಶ್ವರ ಮಾಹಾಸ್ವಾಮೀಜಿ ವಹಿಸಿಕೊಂಡಿದ್ದರು. ಡಾ. ಶರಣಬಸವ ವೆಂಕಟಾಪೂರ, ಅಪ್ಪಣ್ಣಾ ಇನಾಮತಿ, ಸಚಿನ ಪಾಟೀಲ, ಅಡಿವೆಪ್ಪಾ ತಿರ್ಲಾಪೂರ, ಭೀಮರೆಡ್ಡಿ ತಿರ್ಲಾಪೂರ, ಬಸವರಾಜ ತಿರ್ಲಾಪೂರ, ರವಿಗೌಡ ತಿರ್ಲಾಪೂರ, ಸಂಗಪ್ಪ ಬ್ಯಾಹಟ್ಟಿ, ಶಿವಪೂಜ ಅಕ್ಕಿ, ಹನುಮರೆಡ್ಡಿ ಚಾಕಲಬ್ಬಿ, ಹೋನ್ನಪ್ಪ ಹಳ್ಳಿ, ಉಳೆವಪ್ಪ ಅಂಗಡಿ, ಗಂಗಾಧರ ಬ್ಯಾಹಟ್ಟಿ ಹಾಗೂ ಬೂದೀಶ್ವರ ಸ್ವಾಮಿಗಳ ಮಠದ ಸದ್ಭಕ್ತರು ಇದ್ದರು.



