ಬಾಣಂತಿಯರ ಸರಣಿ ಸಾವಿನ ಬೆನ್ನಲ್ಲೇ ಯಾದಗಿರಿಯಲ್ಲಿ 2 ವಾರದಲ್ಲಿ 3 ಶಿಶುಗಳ ಸಾವು!

0
Spread the love

ಬೆಂಗಳೂರು: ರಾಜ್ಯದ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಬೆನ್ನಹಿಂದೆಯೇ ಇದೀಗ ಎರಡು ವಾರಗಳ ಅಂತರದಲ್ಲಿ ಮೂರು ನವಜಾತ ಶಿಶುಗಳ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

Advertisement

ಮಂಗಳವಾರ ಗರ್ಭಿಣಿ ಗಾಯತ್ರಿ ದಾಸರಿ ಅವರು ತಪಾಸಣೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು, ಈ ವೇಳೆ ಕೆಲವು ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಹೋಗಲು ವೈದ್ಯರು ಸೂಚಿಸಿದ್ದಾರೆ. ಪರೀಕ್ಷೆ ಮಾಡಿಸಲು ಯಾದಗಿರಿ ನಗರಕ್ಕೆ ತೆರಳಬೇಕಿದ್ದರಿಂದ ಮಂಗಳವಾರ ರಾತ್ರಿ ಗುರುಮಠಕಲ್ ಪಟ್ಟಣದಲ್ಲಿರುವ ಸಂಬಂಧಿಕರ ಮನೆಯಲ್ಲಿ ತಂಗಿದ್ದಾರೆ.

ಬುಧವಾರ ಮಧ್ಯಾಹ್ನ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮತ್ತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಆ ವೇಳೆಗೆ ಶಿಶುವಿನ ತಲೆ ಭಾಗವು ಹೊರಬಂದಿತ್ತು. ನಂತರ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗಿದ್ದು, ಜನನದ ಕೆಲ ಸಮಯದಲ್ಲೇ ಶಿಶು ಮೃತಪಟ್ಟಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಬಿರಾದಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

 


Spread the love

LEAVE A REPLY

Please enter your comment!
Please enter your name here