ಬೆಂಗಳೂರು:- ಮೂವರು ಯುವಕರಿಂದ ಫುಡ್ ಡೆಲಿವರಿ ಬಾಯ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ನಗರದ ವಿನಾಯಕ ನಗರ ಲೇಔಟ್‌ನಲ್ಲಿ ಇಂದು ಮಧ್ಯರಾತ್ರಿ 1 ಗಂಟೆ ವೇಳೆ ಜರುಗಿದೆ.
ಇನ್ನೂ ಹಲ್ಲೆಯ ವಿಡಿಯೊ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿನಾಯಕ ನಗರ ಲೇಔಟ್‌ನಲ್ಲಿ ಮನೆಯೊಂದರಿಂದ ಹೊರಬರುತ್ತಿದ್ದಾಗ ಡಿಯೋ ಸ್ಕೂಟರ್‌ನಲ್ಲಿ ಹೋದ ಮೂವರು ಯುವಕರು, ಡೆಲಿವರಿ ಬಾಯ್ ಮೇಲೆ ಏಕಾಏಕಿ ಹಲ್ಲೆ ಮಾಡಲು ಮುಂದಾಗಿದ್ದಾರೆ.
ಯುವಕರು ಮಾರಕಾಸ್ತ್ರ ತೆಗೆಯುತ್ತಿದ್ದಂತೆ ಡೆಲಿವರಿ ಬಾಯ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನನ್ನು ಅಟ್ಟಾಡಿಸಿಕೊಂಡು ಹೋಗಿರುವ ಯುವಕರು, ಮೊಬೈಲ್ ಹಾಗೂ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.
ಡೆಲಿವರಿ ಬಾಯ್ ಮೇಲೆ ನಡೆದ ದಾಳಿ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.



