ಕೊಡಗು : ಕೊಡಗು ಆಹಾರ ಇಲಾಖೆ ಉಪನಿರ್ದೇಶಕರಿಗೆ ಹೃದಯಾಘಾತವಾಗಿ ಕಚೇರಿಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
Advertisement
ಆಹಾರ ಇಲಾಖೆ ಉಪನಿರ್ದೇಶಕ ಜೆ.ಬಿ. ಶ್ರೀಧರ್ ಮೂರ್ತಿ(59) ಮೃತ ದುರ್ಧೈವಿಯಾಗಿದ್ದು, ಇಂದು ಬೆಳ್ಳಗ್ಗೆ 11 ಗಂಟೆಗೆ ಸಭೆ ಕರೆದಿದ್ದರು. 11. 20ಕ್ಕೆ ಕಚೇರಿ ಬಂದು ಕುಳಿತಾಕ್ಷಣ ಅಧಿಕಾರಿ ಕುಸಿದು ಬಿದ್ದಿದ್ದಾರೆ.
ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದಾರೆ. ಚಿತ್ರದುರ್ಗ ಮೂಲದ ಶ್ರೀಧರ್ ಮೂರ್ತಿ ಮಡಿಕೇರಿಗೆ ಬಂದು ಕೇವಲ ಒಂದು ತಿಂಗಳಾಗಿತ್ತು. ಅದಲ್ಲದೆ ಮುಂದಿನ ಆರು ತಿಂಗಳಲ್ಲಿ ನಿವೃತ್ತರಾಗಬೇಕಿತ್ತು. ಆದ್ರೆ ಅಷ್ಟರಲ್ಲೇ ಈ ದುರ್ಘಟನೆ ಸಂಭವಿಸಿದೆ.