ತಿಂದ ಊಟದಲ್ಲಿ ವಿಷ?: ಏರ್ ಇಂಡಿಯಾ ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥ!

0
Spread the love

ಲಂಡನ್: ಲಂಡನ್‌ನಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ. ಏರ್​​ ಇಂಡಿಯಾ ವಿಮಾನ AI 130ರಲ್ಲಿ ಹಲವು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಕೆಲವರಿಗೆ ವಾಕರಿಕೆ ಮತ್ತು ತಲೆತಿರುಗುವಿಕೆ ಸೇರಿದಂತೆ ಆರೋಗ್ಯ ವ್ಯಾತ್ಯಾಸ ಕಂಡು ಬಂದಿದೆ. ವಿಮಾನದಲ್ಲಿ ಆರು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 11 ಜನರು ಅಸ್ವಸ್ಥರಾಗಿದ್ದಾರೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Advertisement

ಈ ವೇಳೆ ವಿಮಾನ ಮುಂಬೈನಲ್ಲಿ ಇಳಿದಿದೆ. ನಂತರ ಇಬ್ಬರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಗೆ ವೈದ್ಯಕೀಯ ನೆರವು ನೀಡಿದೆ ಎಂದು ಹೇಳಲಾಗಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಕೆಲವೊಂದು ಬಾರಿ ಇಂತಹ ಘಟನೆಗಳು ನಡೆಯು ಸಾಧ್ಯತೆ ಇರುತ್ತದೆ ಏಕೆಂದರೆ ಕ್ಯಾಬಿನ್​​​ ಒತ್ತಡ ಕೆಲಸಗಳು ಇರುತ್ತದೆ. ಆದರೆ ವಿಷಪ್ರಾಶನ ಆಗಿದ್ದೀಯಾ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಕಂಪನಿ ಹೇಳಿದೆ.

ವಿಮಾನದಲ್ಲಿ ನಡೆದ ಈ ಘಟನೆಯ ಬಗ್ಗೆ ಖಂಡಿತ ನಾವು ತನಿಖೆ ಮಾಡುತ್ತೇವೆ. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಊಟದಿಂದ ಪ್ರಯಾಣಿಕರು ಅಸ್ವಸ್ಥರಾಗಿದ್ದರಾ? ಅಥವಾ ಆಮ್ಲಜನಕದ ಕೊರತೆಯಿಂದ ಈ ಸಮಸ್ಯೆ ಆಗಿದ್ದೀಯಾ ಎಂಬ ಬಗ್ಗೆ ನೋಡಬೇಕಿದೆ.

ಕೆಲವೊಂದು ಬಾರಿ ಆಮ್ಲಜನಕದ ಕೊರತೆಯಿಂದಲ್ಲೂ ಅಸ್ವಸ್ಥರಾಗುವ ಸಾಧ್ಯತೆ ಕೂಡ ಇದೆ ಎಂದು ಕಂಪನಿ ಹೇಳಿದೆ.ಇನ್ನು ಇದೆ ಊಟವನ್ನು ಪೈಲೆಟ್​​​ಗಳು ಕೂಡ ಮಾಡುತ್ತಾರೆ, ಆದರೆ ಅವರಿಗೆ ಯಾವುದೇ ಇಂತಹ ಸಮಸ್ಯೆ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here