ವಿಜಯಸಾಕ್ಷಿ ಸುದ್ದಿ, ಗದಗ : ಕೆ.ಎಚ್. ಪಾಟೀಲ ಸ್ಪೋರ್ಟ್ಸ್ ಇವೆಂಟ್ಸ್ ಹಾಗೂ ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಎಜುಕೇಶನ್ ಅಕಾಡೆಮಿ ಗದಗ ಇವರ ವತಿಯಿಂದ ನಡೆಯುತ್ತಿರುವ, ಸಚಿವ ಡಾ. ಎಚ್.ಕೆ. ಪಾಟೀಲ ಅಯೋಜನೆಯಲ್ಲಿ ಯುವಕರ ಕಣ್ಮಣಿ ಕೃಷ್ಣಗೌಡ ಪಾಟೀಲ ಹಾಗೂ ಸಚಿನ ಪಾಟೀಲ ಇವರ ಉಪಸ್ಥಿತಿಯಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ನಡೆಯುತ್ತಿರುವ ಫುಟ್ಬಾಲ್ ಪಂದ್ಯಾವಳಿಗಳನ್ನು ಸಾವಿರಾರು ಜನ ವೀಕ್ಷಣೆ ಮಾಡಿದ್ದನ್ನು ನೋಡಿ ಸಚಿವ ಎಚ್.ಕೆ. ಪಾಟೀಲ ಸಂತಸ ವ್ಯಕ್ತಪಡಿಸಿದರು.
ಫೈನಲ್ ಪಂದ್ಯ ಅವೆಂಜರ್ಸ್-ಕಿಕ್ಕರ್ಸ್ ತಂಡಗಳ ನಡುವೆ ನಡೆದು ಕಿಕ್ಕರ್ಸ್ ತಂಡ 0-1 ಗೋಲುಗಳಿಂದ ಪಂದ್ಯವನ್ನು ಗೆದ್ದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ರೆಬೆಲ್ ಹಾಗೂ ಡಿಫೆಂಡರ್ಸ್ ನಡುವಿನ ಪಂದ್ಯದಲ್ಲಿ ರೆಬೆಲ್ ತಂಡ 0-1 ಗೋಲುಗಳಿಂದ ಗೆದ್ದು ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಅವೆಂಜರ್ಸ್ ತಂಡ ಸೋತು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ಫೈನಲ್ ಪಂದ್ಯದಲ್ಲಿ ಜಯಶಾಲಿಯಾದ ಕಿಕ್ಕರ್ಸ್ ತಂಡಕ್ಕೆ ಸಚಿವರಾದ ಡಾ. ಎಚ್.ಕೆ. ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು. ಹೈಯೆಸ್ಟ್ ಗೋಲ್ ಸ್ಕೋರರ್ ಪ್ರಶಸ್ತಿ ರೆಬೆಲ್ ತಂಡದ ರಾಘು ದೊಡ್ಡಮನಿಯವರಿಗೆ ದೊರೆತರೆ, ಬೆಸ್ಟ್ ಗೋಲರ್ ಪ್ರಶಸ್ತಿ ಕಿಕರ್ಸ್ ತಂಡದ ಪ್ರಜ್ವಲ್ ಅವರದಾಯಿತು. ಶ್ರೇಷ್ಠ ಆಟಗಾರ ಪ್ರಶಸ್ತಿ ಸುದರ್ಶನ್ ಲೋಕುರ್ ಅವರಿಗೆ ದೊರೆಯಿತು ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಎಜುಕೇಶನ್ ಅಕಾಡೆಮಿಯ ಅಧ್ಯಕ್ಷ ಹಾಗೂ ಪಂದ್ಯಾವಳಿಗಳ ಆಯೋಜಕರಾದ ಸರ್ಫರ್ರಾಜ್ ಶೇಖ ತಿಳಿಸಿದರು.