ವಿಜಯಸಾಕ್ಷಿ ಸುದ್ದಿ, ಗದಗ: 19 ವರ್ಷದೊಳಗಿನ ಪುಟಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಗಾಗಿ ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಗದಗ ಸಿಟಿ ಫುಟ್‌ಬಾಲ್ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಫುಟ್‌ಬಾಲ್ ತರಬೇತಿ ಶಿಬಿರವನ್ನು ಗದಗ ಜಿಲ್ಲಾ ಯೂಥ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಶಿಬಿರದ ಲೋಗೋ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸೂಕ್ತವಾಘಿದೆ. ಗದಗ ಜಿಲ್ಲಾ ಫುಟ್‌ಬಾಲ್ ಕ್ಲಬ್ ಹೆಸರಿನ ಮೂಲಕ ಫುಟ್‌ಬಾಲ್ ತರಬೇತಿ ನೀಡುತ್ತಿರುವುದು ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ. ಸುದರ್ಶನ ಲೋಕೂರ ಎಂಬ ಪ್ರತಿಭಾನ್ವಿತ ಫುಟ್‌ಬಾಲ್ ಆಟಗಾರ ಅಂತಾರಾಷ್ಟ್ರೀಯ ತಂಡದಲ್ಲಿ ಆಟವಾಡಿದ ಅನುಭವ ಹೊಂದಿದ್ದಾರೆ. ಕ್ರೀಡಾಪಟುಗಳು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡು ಗದಗ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಸಾಮ್ಸನ್ ಡಾನ್, ಶಶಿಕುಮಾರ ಮುಂಡರಗಿ, ರಾಮಚಂದ್ರ ಮುಂಡರಗಿ, ಆಶೀಸ್ ತೋಸ್ನಿವಾಲ್, ರೋಹಿತ ನಾಯ್ಕರ, ರಿಚರ್ಡ ಧರ್ಮದಾಸ, ರಾಘವೇಂದ್ರ ಮುಂಡರಗಿ, ವಿಲ್‌ಸನ್, ಮಂಜುನಾಥ ಬಾಗಲಕೋಟಿ ಸೇರಿದಂತೆ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು, ಕ್ರೀಡಾ ತರಬೇತುದಾರರು ಉಪಸ್ಥಿತರಿದ್ದರು.