HomeGadag Newsನದಿ ಪಾತ್ರದ ಹಳ್ಳಿಗಳಿಗೆ ಬಿ.ಆರ್. ಯಾವಗಲ್ ಭೇಟಿ

ನದಿ ಪಾತ್ರದ ಹಳ್ಳಿಗಳಿಗೆ ಬಿ.ಆರ್. ಯಾವಗಲ್ ಭೇಟಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರಗುಂದ : ನವಿಲುತೀರ್ಥ ಅಣೆಕಟ್ಟಿನಿಂದ ಹೆಚ್ಚಿನ ನೀರು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ನರಗುಂದ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮಲಪ್ರಭಾ ನದಿ ಪಾತ್ರದ ಹಳ್ಳಿಗಳಿಗೆ ಮಾಜಿ ಸಚಿವ ಬಿ.ಆರ್. ಯಾವಗಲ್ ಸ್ಥಳೀಯ ಮುಖಂಡರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಯ ಸ್ಥಿತಿ-ಗತಿಯ ಮಾಹಿತಿ ಪಡೆದುಕೊಂಡರು.

ಕಿತ್ತಲಿ ಹಾಗೂ ಶಿರೋಳಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಫಸಲಿಗೆ ಬಂದ ಬೆಳೆ ನೀರಲ್ಲಿ ನಿಂತಿರುವುದನ್ನು ಗಮನಿಸಿದರು.

ಈ ಸಂದರ್ಭದಲ್ಲಿ ಶಿರೋಳ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಾಯ್.ಬಿ. ಸಂಕನಗೌಡ್ರ, ಗ್ರಾ.ಪಂ ಮಾಜಿ ಸದಸ್ಯ ಪ್ರಕಾಶ ಸೋಬರದ, ಗ್ರಾ.ಪಂ ಸದಸ್ಯರಾದ ಭದ್ರಯ್ಯ ಹೊಸಮನಿ, ರಂಜಾನ ನದಾಫ್, ದ್ಯಾಮಣ್ಣ ಕಾಡಪ್ಪನವರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!