ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘ ಬೆಂಗಳೂರು, ಜಿಲ್ಲಾ ಘಟಕ ಗದಗದ ಪ್ರಥಮ ಕಾರ್ಯನಿರ್ವಹಣಾ ಸಮಿತಿ ಸಭೆಯು ನಗರದ ಮುನ್ಸಿಪಲ್ ಹೈಸ್ಕೂಲಿನಲ್ಲಿ ನೂತನ ಪಶ್ಚಿಮ ಜಿಲ್ಲಾಧ್ಯಕ್ಷ ಡಾ. ಎಸ್.ಎಂ. ಮಠ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳ ನೇಮಕ ಮತ್ತು ತಾಲೂಕಾ ಘಟಕಗಳಿಗೆ ಪದಾಧಿಕಾರಿಗಳು, ಸದಸ್ಯರ ಆಯ್ಕೆಯ ಬಗ್ಗೆ ಚರ್ಚಿಸಲಾಯಿತು. ಎರಡು-ಮೂರು ದಿನಗಳಲ್ಲಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಾಡಲಾಗುವುದೆಂದು ಸಭೆಗೆ ಮಾಹಿತಿ ನೀಡಿ ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸಲು ತಿರ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಶಾಂತಕುಮಾರ ಬಿ.ಭಜಂತ್ರಿ, ಕಾರ್ಯಾಧ್ಯಕ್ಷ ಪ್ರವೀಣಕುಮಾರ ಹಿರೇಮಠ, ಉಪಾಧ್ಯಕ್ಷ ವಿರೇಶ ಕಮ್ಮಾರ, ಕಾರ್ಯದರ್ಶಿ ಎಂ.ಕೆ. ಹುಯಿಲಗೋಳ, ರಾಜ್ಯ ಪರಿಷತ್ ಸದಸ್ಯ ಕಿರಣಕುಮಾರ ಎಸ್.ಮುಂಡರಗಿ, ಖಜಾಂಚಿ ಪುಪ್ಪಾವತಿ ಟಿ.ಬಿಸನಳ್ಳಿ, ಜಂಟಿ ಕಾರ್ಯದರ್ಶಿ ಆರ್.ಬಿ. ಹಾದಿಮನಿ, ಸಂಘಟನಾ ಕಾರ್ಯದರ್ಶಿ ವೀರಣ್ಣ ಅಕ್ಕಿ, ಸುನೀಲ ಲಮಾಣಿ, ಡಾ. ಮಹೇಶ ಕೇರಿ, ರವಿಕುಮಾರ ಜಾಗನೂರ, ಎಸ್.ಎಫ್. ಬೆಳಗಿ, ಸಿ.ಎಸ್. ಹಿರೇಮಠ, ಮಂಜುನಾಥ ಬಳ್ಳಾರಿ ಮತ್ತೀತರರು ಉಪಸ್ಥಿತರಿದ್ದರು.



