ಬಾಗಲಕೋಟೆ:- ಮದುವೆಯಾಗೋದಾಗಿ ಹೇಳಿ ಬಾಗಲಕೋಟೆ ಮಹಿಳೆಯಿಂದ 5.50 ಲಕ್ಷ ವಂಚನೆ ಎಸಗಿದ್ದ ವಿದೇಶಿ ಪ್ರಜೆಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Advertisement
ಬಂಧಿತ ಆರೋಪಿಯನ್ನು ಅಲಿವರ್ ವುಗುವೊ ಒಕಿಚಿಕು ಎಂದು ಗುರುತಿಸಲಾಗಿದೆ. ಈತ ಅಲಿವರ್ ಇಳಕಲ್ ಮೂಲದ ಮಹಿಳೆಗೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿ 5.50 ಲಕ್ಷ ರೂ. ಪಡೆದು ಮೋಸಮಾಡಿದ್ದ. ಹೀಗಾಗಿ ಮೋಸಹೋದ ಮಹಿಳೆ ಇಳಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳೆಯ ದೂರಿನ ಅನ್ವಯ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬಾಗಲಕೋಟೆ ಸಿಇಎನ್ ಪೊಲೀಸರು, ಈತನ ಜಾಡು ಹಿಡಿದು ಮುಂಬೈನಲ್ಲಿ ನೆಲೆಸಿದ್ದ ಆರೋಪಿಯನ್ನ ವಶಕ್ಕೆ ಪಡೆದು, ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತನಿಂದ 4 ಮೊಬೈಲ್, 1 ಲ್ಯಾಪ್‌ಟಾಪ್, ಪಾಸ್‌ಪೋರ್ಟ್, ಅಮೆರಿಕ ಡಾಲರ್ ಇರುವ ಬಂಡಲ್‌ಗಳನ್ನು ಜಪ್ತಿ ಮಾಡಲಾಗಿದೆ.