ಕೋಟಿ-ಕೋಟಿ ಆಫರ್ Reject ಮಾಡಿದ ವಿದೇಶಿ ಆಟಗಾರ: IPL ನಿಂದ ಹಿಂದೆ ಸರಿಯಲು ಕಾರಣ?

0
Spread the love

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಈಗಾಗಲೇ ಆರಂಭವಾಗಿದ್ದು, ಸುಮಾರು 9 ಪಂದ್ಯಗಳು ಕೂಡ ನಡೆದು ಹೋಗಿದೆ. ಇದಾಗ್ಯೂ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಒಂದೇ ಒಂದು ಅವಕಾಶ ಎದುರು ನೋಡುತ್ತಿರುವ ಆಟಗಾರರ ಮಧ್ಯೆ ಇಂಗ್ಲೆಂಡ್ ದಾಂಡಿಗ ಬೆನ್ ಡಕೆಟ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಅದು ಕೂಡ ಕೋಟಿ ಕೋಟಿ ರೂ. ಡೀಲ್ ಅನ್ನು ತಿರಸ್ಕರಿಸುವ ಮೂಲಕ ಎಂದರೆ ನೀವು ನಂಬಲೇಬೇಕು.

Advertisement

ಈ ಬಾರಿಯ ಐಪಿಎಲ್​ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಹ್ಯಾರಿ ಬ್ರೂರಿ ಹಿಂದೆ ಸರಿದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸುವ ಸಲುವಾಗಿ ಐಪಿಎಲ್​ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಬ್ರೂಕ್ ಸ್ಪಷ್ಟನೆಯನ್ನು ಸಹ ನೀಡಿದ್ದರು.

ಇತ್ತ ಹ್ಯಾರಿ ಬ್ರೂಕ್ ಹೊರಗುಳಿಯುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಬೆನ್ ಡಕೆಟ್ ಅನ್ನು ಸಂಪರ್ಕಿಸಿದೆ. ಅಲ್ಲದೆ ಬದಲಿ ಆಟಗಾರನಾಗಿ ಐಪಿಎಲ್​ಗೆ ಬರುವಂತೆ ಕೋಟಿ ಮೊತ್ತದ ಆಫರ್​ ಅನ್ನು ಸಹ ನೀಡಿದ್ದಾರೆ. ಆದರೆ ಈ ಆಫರ್ ಅನ್ನು ಅವರು ತಿರಸ್ಕರಿಸಿದ್ದಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಬಹಿರಂಗಪಡಿಸಿದ್ದಾರೆ.

ಬೆನ್ ಡಕೆಟ್ ಅವರನ್ನು ಐಪಿಎಲ್​ಗೆ ಕರೆತರಲು ಡೆಲ್ಲಿ ಕ್ಯಾಪಿಟಲ್ಸ್ ತೆರೆಮರೆಯ ಪ್ರಯತ್ನ ನಡೆಸಿದ್ದಾರೆ. ಆದರೆ ಅವರು ಈ ಆಫರ್ ಅನ್ನು ಸ್ವೀಕರಿಸಿಲ್ಲ. ಕುತೂಹಲಕಾರಿ ವಿಷಯ ಎಂದರೆ ಡಕೆಟ್ ಈ ಹಿಂದೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಆಫರ್ ಸಿಕ್ಕರೂ ಅವರು ಬರದಿರುವುದೇ ಅಚ್ಚರಿ ಮೂಡಿಸಿದೆ ಎಂದು ಮೈಕಲ್ ವಾನ್ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here