ಭ್ರೂಣ ಹತ್ಯೆ ತಡೆಗೆ ಕಾರ್ಯ ಪಡೆ ರಚನೆ: 3 ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಸೆಂಟರ್ ತಪಾಸಣೆ

0
Spread the love

ಬೆಳಗಾವಿ:- ಭ್ರೂಣಗಳ ಹತ್ಯೆ ತಡೆಯಲು, ಸ್ಕ್ಯಾನಿಂಗ್​ ಸೆಂಟರ್​ಗಳ ಮೇಲೆ ತೀವ್ರ ನಿಗಾ ವಹಿಸಲು ರಾಜ್ಯಮಟ್ಟದ ಕಾರ್ಯ ಪಡೆ ರಚನೆ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಹೆಣ್ಣು ಭ್ರೂಣ ಹತ್ಯೆ ಕುರಿತು ಪರಿಷತ್​ನಲ್ಲಿ ಜೆಡಿಎಸ್​ನ ಕೆ.ಎ.ತಿಪ್ಪೇಸ್ವಾಮಿ, ಬಿ.ಎಂ.ಫಾರೂಖ್, ಟಿ.ಎ.ಶರವಣ, ಸಿ.ಎನ್.ಮಂಜೇಗೌಡ , ಕಾಂಗ್ರೆಸ್​ನ ಉಮಾಶ್ರೀ, ಬಿಜೆಪಿಯ ಭಾರತಿ ಶೆಟ್ಟಿ ಪ್ರಸ್ತಾಪಿಸಿದರು.

Advertisement

ಈ ಕುರಿತು ಸಚಿವರು ಸದನಕ್ಕೆ ಮಾಹಿತಿ ನೀಡಿ, ರಾಜ್ಯದಲ್ಲಿ 6,395 ಸ್ಕ್ಯಾನಿಂಗ್​ ಸೆಂಟರ್ ನೋಂದಣಿಯಾಗಿದ್ದು, ಅದರಲ್ಲಿ 6068 ಖಾಸಗಿ, 327 ಸರ್ಕಾರಿ ಸ್ಕ್ಯಾನಿಂಗ್ ಸೆಂಟರ್ ಕಾರ್ಯನಿರ್ವಹಿಸುತ್ತಿವೆ. ಬಾಲಿಕಾ ಸಾಫ್ಟ್್ಟೇರ್ ಮೂಲಕ ನೋಂದಣಿ ಕಡ್ಡಾಯಗೊಳಿಸಲಾಗುತ್ತಿದೆ. ಪಿಸಿ ಮತ್ತು ಪಿಎನ್​ಡಿಟಿ ಕಾಯ್ದೆ ಅಡಿ ಎಲ್ಲ ಶಾಸನಬದ್ಧ ಸಮಿತಿಗಳು ರಾಜ್ಯ,

ಜಿಲ್ಲಾ ಮಟ್ಟದಲ್ಲಿ ರಚನೆಗೊಂಡಿವೆ. ಈ ಸಮಿತಿಗಳು ಪ್ರತಿ 3 ತಿಂಗಳಿಗೊಮ್ಮೆ ಸ್ಕಾಯನಿಂಗ್ ಸೆಂಟರ್ ತಪಾಸಣೆ ನಡೆಸಲಿವೆ. ಇಲ್ಲಿಯವರೆಗೆ 4,408 ಸ್ಕಾಯನಿಂಗ್ ಸೆಂಟರ್​ಗಳನ್ನು ತಪಾಸಣೆ ನಡೆಸಲಾಗಿದೆ. ಈ ವೇಳೆ ಸಾಕಷ್ಟು ಪ್ರಮಾಣದಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿರುವುದು ಬೆಳಕಿಗೆ ಬಂದಿದು, 100 ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, 24 ಪ್ರಕರಣಗಳನ್ನು ದಂಡ ವಿಧಿಸಿ ಖುಲಾಸೆಗೊಳಿಸಲಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here