ವಾಷಿಂಗ್ಟನ್:- ಅಮೆರಿಕದ ಮಾಜಿ ಅಧ್ಯಕ್ಷ 100 ವರ್ಷದ ಜಿಮ್ಮಿ ಕಾರ್ಟರ್ ವಿಧಿವಶರಾಗಿದ್ದಾರೆ.
ಮಾನವೀಯ ಕೆಲಸಕ್ಕಾಗಿ 2002 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದಿದ್ದ ಕಾರ್ಟರ್, ಜಾರ್ಜಿಯಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಇನ್ನೂ ಕಾರ್ಟರ್, ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯಸ್ಥಿತಿಕೆ ನಡೆಸಿ ಶಾಂತಿ ಮಾತುಕತೆ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದರು.
1977 ರಿಂದ 1981 ರವರೆಗೆ 39ನೇ ಅಮೆರಿಕದ ಅಧ್ಯಕ್ಷರಾಗಿ ಜಿಮ್ಮಿ ಕಾರ್ಟರ್ ಸೇವೆ ಸಲ್ಲಿಸಿದ್ದರು. 1980 ರ ಚುನಾವಣೆಯಲ್ಲಿ ನಟ, ರಾಜಕಾರಣಿ ರೊನಾಲ್ಡ್ ರೇಗನ್ ಅವರ ವಿರುದ್ಧ ಸೋತಿದ್ದರು ಎನ್ನಲಾಗಿದೆ.
ಇನ್ನೂ ಕಾರ್ಟರ್ ನಿಧನಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿ ಹಲವು ಸಂತಾಪ ಸೂಚಿಸಿದ್ದಾರೆ.



