ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಡ್ರಿಂಕ್ & ಡ್ರೈವ್ ಕೇಸಲ್ಲಿ ಅರೆಸ್ಟ್ ಆಗಿದ್ದಾರೆ.
ಏಪ್ರಿಲ್ 5ರ ಭಾನುವಾರದಂದು ಸಿಡ್ನಿಯ ಮಲಾಬಾರ್ ರೋಡ್‌ನ ಮರೂಬ್ರಾನಲ್ಲಿ ಪೊಲೀಸ್ ಅಧಿಕಾರಿಗಳು ಡ್ರಿಂಕ್ & ಡ್ರೈವ್ ಟೆಸ್ಟ್ ಮಾಡುತ್ತಿದ್ದರು. ಇದನ್ನು ಗಮನಿಸಿದ ವಾರ್ನರ್ ಟೆಸ್ಟ್ ಮಾಡುತ್ತಿದ್ದ ಸ್ಥಳದಿಂದ ದೂರದಲ್ಲೇ ಕಾರನ್ನು ಪಾರ್ಕ್ ಮಾಡಿದ್ದಾರೆ. ಇದನ್ನು ಕಂಡ ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಬಂದು ವಾರ್ನರ್ ಅವರ ಉಸಿರಾಟದ ಪರೀಕ್ಷೆ ಮಾಡಿದ್ದಾರೆ. ಆಗ ಮದ್ಯಸೇವನೆ ಮಾಡಿರುವುದು ದೃಢವಾಗಿದೆ.
ವರದಿಗಳ ಪ್ರಕಾರ, ಆಲ್ಕೋಹಾಲ್ ಲೆವೆಲ್ 0.1 ಆಗಿದ್ದು, ಇದು ಆಸ್ಟ್ರೇಲಿಯಾ ಕಾನೂನುಬದ್ಧ ಮಿತಿಗಿಂತ ಸುಮಾರು ಎರಡು ಪಟ್ಟು ಹೆಚ್ಚು ಎನ್ನಲಾಗಿದೆ. ಕೂಡಲೇ ಪೊಲೀಸರು ವಾರ್ನರ್ ಅವರನ್ನು ಬಂಧಿಸಿ, ಮರೂಬ್ರಾ ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿ, ಬಿಟ್ಟುಕಳುಹಿಸಿದ್ದಾರೆ.



