ಬೆಂಗಳೂರು:- ಕರ್ನಾಟಕ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಸಿದ್ದ ಧೀಮಂತ ನಾಯಕ ಮಾಜಿ ಮುಖ್ಮಂತ್ರಿ ಡಿ. ದೇವರಾಜು ಅರಸು ಅವರ 110 ನೇ ಜನ್ಮ ದಿನಾರಣೆಯನ್ನು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಜರುಗಿದೆ.
ವಿಧಾನಸೌಧದಲ್ಲಿ ಡಿ. ದೇವರಾಜು ಅರಸು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಗೌರವ ನಮನ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಡಿ. ದೇವರಾಜು ಅರಸು ಅವರ ಸಾಧನೆಗಳನ್ನು ಕೊಂಡಾಡಿದ್ದಾರೆ. ಅಲ್ಲದೇ ದೇವರಾಜ್ ಅವರ ಹುಟ್ಟುಹಬ್ಬದ ಹಿನ್ನೆಲೆ ಅವರು ಬಳಸುತ್ತಿದ್ದ ಅಂಬಾಸಿಡರ್ ಕಾರಿಗೆ ಪೂಜೆ ಸಲ್ಲಿಸಿ ಗೌರವಿಸಲಾಗಿದೆ.
ಇನ್ನೂ ದಿವಂಗತ ಡಿ. ದೇವರಾಜ್ ಅರಸ್ ಅವರು ರಾಜ್ಯ ಕಂಡ ಶ್ರೇಷ್ಠ ಸಾಮಾಜಿಕ ಸುಧಾರಕರೂ ಹೌದು. ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿ ಮಾಡಿ, ಬಡತನ ನಿವಾರಣೆ ಮಾಡಿದವರು. ಇವರ ಜನ್ಮದಿನದಂದು ಅನೇಕ ರಾಜಕೀಯ ನಾಯಕರು ಅವರ ಸಾಧನೆಗಳನ್ನು ಸ್ಮರಿಸುತ್ತಿದ್ದಾರೆ.



