HomeGadag Newsಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನ: ಮಾಜಿ ಸಂಸದ ಆರ್.ಎಸ್. ಪಾಟೀಲ ಸಂತಾಪ

ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನ: ಮಾಜಿ ಸಂಸದ ಆರ್.ಎಸ್. ಪಾಟೀಲ ಸಂತಾಪ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರೋಣ: ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನರಾದ ಸುದ್ದಿ ತೀವ್ರ ಆಘಾತ ಹಾಗೂ ತಡೆಯಲಾಗದ ದ್ರಃಖ ತಂದಿದೆ ಎಂದು ಬಾಗಲಕೊಟ ಲೋಕಸಭಾ ಮತಕ್ಷೇತ್ರದ ಆರ್.ಎಸ್. ಪಾಟೀಲ ಕಣ್ಣೀರಾದರು.

ಅವರು ಮಂಗಳವಾರ ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ, ಸಂತಾಪ ಸೂಚಿಸುವ ಸಂದರ್ಭದಲ್ಲಿ ಭಾವುಕರಾದರು.

ಎಸ್.ಎಂ. ಕೃಷ್ಣರವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಟ ನಡೆಸಿದವರು. ಇವತ್ತು ರಾಜ್ಯ ಬೆಳಯಲು ಅವರ ಕೊಡುಗೆ ಸಾಕಷ್ಟಿದೆ. ಮುಖ್ಯವಾಗಿ ಐಟಿ-ಬಿಟಿಗಳನ್ನು ತರುವ ಮೂಲಕ ಬೆಂಗಳೂರನ್ನು ಇವತ್ತಿನ ಸಿಲಿಕಾನ್ ಸಿಟಿ ಮಾಡಿದ್ದು ಅವರೇ ಎಂದು ಸ್ಮರಿಸಿದ ಆರ್.ಎಸ್. ಪಾಟೀಲರು, ಅವರ ಯೋಜನೆಗಳು ಇಂದಿಗೂ ಸ್ಮರಣೀಯ ಎಂದರು.

ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನು ಲೋಕಸಭಾ ಸದಸ್ಯನಾಗಿದ್ದೆ. ಆಗ, ಆಲಮಟ್ಟಿ ಡ್ಯಾಂ ನಿರ್ಮಿಸಲು ಹಿರಿಯ ನಾಯಕ ಮಲ್ಲಿಕಾರ್ಜುನ ನೇತೃತ್ವದಲ್ಲಿ ಸಚಿವ ಸಂಪುಟವನ್ನು ರಚನೆ ಮಾಡಿ ಮಹತ್ವದ ನಿರ್ಧಾರವನ್ನು ಕೈಗೊಂಡರು. ಹಿನ್ನೀರಿನಿಂದ ಮುಳಗಡೆಯಾಗಿದ್ದ ನಾಗರಿಕ ಸಮುದಾಯಕ್ಕೆ ಸೂಕ್ತ ಪರಿಹಾರವನ್ನು ಒದಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದ ಧೀಮಂತ ನಾಯಕ ಎಸ್.ಎಂ. ಕೃಷ್ಣ ಎಂದರು.

ಎಸ್.ಎಂ ಕೃಷ್ಣ ನಮ್ಮ ನಿವಾಸಕ್ಕೆ ಗುಲಾಂ ನಬಿ ಅಜಾದ್‌ರನ್ನು ಕರೆ ತಂದಿದ್ದರು ಎಂದು ನೆನಪಿಸಿದ ಅವರು, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂತಾಪ ಸೂಚಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!