ತಿರುವನಂತಪುರಂ:- ವಯೋಸಹಜ ಅನಾರೋಗ್ಯದಿಂದ ಕೇರಳ ಮಾಜಿ ಸಿಎಂ ವಿ.ಎಸ್ ಅಚ್ಯುತಾನಂದನ್ ಇಂದು (101) ನಿಧನ ಹೊಂದಿದ್ದಾರೆ.
ಶತಾಯುಷಿ ಆಗಿರುವ ಅಚ್ಯುತಾನಂದನ್, ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದಾಗಿ, ಇತ್ತೀಚಿಗೆ ಅವರು ಹಾಸಿಗೆ ಹಿಡಿದಿದ್ದರು. ತಿರುವನಂತಪುರಂನ ಪಟ್ಟಂನಲ್ಲಿರುವ ಎಸ್ಯುಟಿ ಆಸ್ಪತ್ರೆಯಲ್ಲಿ 1 ತಿಂಗಳಿಗೂ ಹೆಚ್ಚು ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮಧ್ಯಾಹ್ನ 3.30ಕ್ಕೆ ನಿಧನರಾದರು.
ಶತಾಯುಷಿಯಾದ ಅಚ್ಯುತಾನಂದನ್ (101), ಕೇರಳ ರಾಜಕಾರಣದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ವ್ಯಕ್ತಿಯಾಗಿದ್ದಾರೆ. ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅಚ್ಯುತಾನಂದನ್, 2006ರಿಂದ 2011ರವರೆಗೆ ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಅವರು ಒಟ್ಟು 10 ಚುನಾವಣೆಗಳನ್ನು ಎದುರಿಸಿದ್ದಾರೆ.
ಅಚ್ಯುತಾನಂದನ್ ಕಳೆದ ಕೆಲವು ವರ್ಷಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.



