ಹುಬ್ಬಳ್ಳಿ:- ವಿಧಾನ ಪರಿಷತ್ ಮಾಜಿ ಸದಸ್ಯೆ 84 ವರ್ಷದ ಸಾವಿತ್ರಮ್ಮ ಗುಂಡಿ ವಿಧಿವಶರಾಗಿದ್ದಾರೆ.
Advertisement
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಾವಿತ್ರಿ ಗುಂಡಿ ಅವರು, ಇಂದು ಸಂಜೆ ಹುಬ್ಬಳ್ಳಿಯ ಜೆಸಿ ನಗರದಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಸಾವಿತ್ರಿ ಗುಂಡಿ ಅವರು ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿದ್ದರು. ಅಲ್ಲದೇ ವಕೀಲರು, ವಿಧಾನ ಪರಿಷತ್ ಮಾಜಿ ಸದಸ್ಯೆ ಆಗಿಯೂ ಕೆಲಸ ನಿರ್ವಹಿಸಿದರು. ಮೃತರಿಗೆ ಸಾಕಷ್ಟು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 1 ಕ್ಕೆ ಮಂಟೂರು ರಸ್ತೆಯಲ್ಲಿನ ಕಲಬುರಗಿ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ.