ಟೀಂ ಇಂಡಿಯಾ ವೇಗಿ ಸಿದ್ಧಾರ್ಥ್ ಕೌಲ್ ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಸಿದ್ಧಾರ್ಥ್ ಕೌಲ್ ನಿವೃತ್ತಿ ಘೋಷಿಸಿದ್ದಾರೆ. ಸಿದ್ಧಾರ್ಥ್ ಟೀಂ ಇಂಡಿಯಾ ಪರ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದು, ಅವರು ಐಪಿಎಲ್ನಲ್ಲೂ ಆಡಿದ್ದಾರೆ.
‘ನಾನು ಬಾಲ್ಯದಲ್ಲಿ ಮತ್ತು ಪಂಜಾಬ್ನ ಮೈದಾನಗಳಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ದೇಶವನ್ನು ಪ್ರತಿನಿಧಿಸುವ ಕನಸು ಕಂಡಿದ್ದೆ. ದೇವರ ದಯೆಯಿಂದ ಆ ಕನಸು 2018 ರಲ್ಲಿ ನನಸಾಯಿತು.
ಟಿ20 ತಂಡದಲ್ಲಿ ನನ್ನ ಕ್ಯಾಪ್ ಸಂಖ್ಯೆ 75 ಮತ್ತು ಏಕದಿನ ತಂಡದಲ್ಲಿ ನನ್ನ ಕ್ಯಾಪ್ ಸಂಖ್ಯೆ 221 ಆಗಿತ್ತು. ಈಗ ನಾನು ಭಾರತದಲ್ಲಿ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವ ಮತ್ತು ನನ್ನ ನಿವೃತ್ತಿಯನ್ನು ಘೋಷಿಸುವ ಸಮಯ ಬಂದಿದೆ ಎಂದು ಬರೆದುಕೊಂಡಿದ್ದಾರೆ.
ಸಿದ್ಧಾರ್ಥ್ ಕೌಲ್ 2018 ರಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದರು. ಇದರ ನಂತರ, ಅವರು ಅದೇ ವರ್ಷದಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದ್ದರು.