HomePolitics Newsಕೇಂದ್ರದ ಮಾಜಿ ಸಚಿವೆ ಗಿರಿಜಾ ವ್ಯಾಸ್ ವಿಧಿವಶ!

ಕೇಂದ್ರದ ಮಾಜಿ ಸಚಿವೆ ಗಿರಿಜಾ ವ್ಯಾಸ್ ವಿಧಿವಶ!

For Dai;y Updates Join Our whatsapp Group

Spread the love

ಅಹಮದಾಬಾದ್:- ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ಗಿರಿಜಾ ವ್ಯಾಸ್ ವಿಧಿವಶರಾಗಿದ್ದಾರೆ.

ಉದಯಪುರದ ತಮ್ಮ ಮನೆಯಲ್ಲಿ ಏ.2ರಂದು ಗಿರಿಜಾ ವ್ಯಾಸ್ ದೇವರಿಗೆ ಆರತಿ ಮಾಡುವ ವೇಳೆ ಅವರ ಉಡುಪಿಗೆ ಬೆಂಕಿ ತಗುಲಿ ತೀವ್ರ ಸುಟ್ಟಗಾಯಗಳಾಗಿತ್ತು. ಈ ಹಿನ್ನೆಲೆ ಗಿರಿಜಾ ಅವರನ್ನು ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲೇ ಗಿರಿಜಾ ವ್ಯಾಸ್ ಕೊನೆಯುಸಿರೆಳೆದಿದ್ದಾರೆ. ಗಿರಿಜಾ ಅವರ ನಿಧನದ ಕುರಿತು ಸಹೋದರ ಗೋಪಾಲ್ ಶರ್ಮಾ ಖಚಿತಪಡಿಸಿದ್ದಾರೆ.

ಇನ್ನೂ 1991ರಲ್ಲಿ ಉದಯಪುರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಸಂಸತ್ತು ಪ್ರವೇಶಿಸಿದ್ದ ಗಿರಿಜಾ, ಅಂದಿನ ಪ್ರಧಾನಿಯಾಗಿದ್ದ ನರಸಿಂಹ ರಾವ್ ಅವರ ನೇತೃತ್ವದ ಸರ್ಕಾರದಲ್ಲಿ ಕೇಂದ್ರದ ಸಚಿವೆಯಾಗಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!