ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದಲ್ಲಿ ಅಧಿಕಾರದಲ್ಲಿರುವ ಹಾಗೂ ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹೇಳಿದರು.
ಅವರು ಪಟ್ಟಣದ ಪಿಕಾರ್ಡ ಬ್ಯಾಂಕ್ ಎದುರಿನಲ್ಲಿ ಆನಂದಸ್ವಾಮಿ ಗಡ್ಡದೇವರಮಠ ಅಭಿಮಾನಿ ಬಳಗದಿಂದ ಹಾವೇರಿ ಗದಗ ಲೋಕಸಭಾ ಕ್ಷೇತ್ರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಲಕ್ಷ್ಮೇಶ್ವರ ಕಾರ್ಯಾಲಯವನ್ನು ಉದ್ಘಾಟಿಸಿ, `ನಮ್ಮ ಕಾಂಗ್ರೆಸ್-ನಮ್ಮ ಹೆಮ್ಮೆ’ ಗೋಡೆ ಬರಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಸದ್ಯದಲ್ಲಿಯೇ ಲೋಕಸಭಾ ಚುನಾವಣೆಗಳು ಬರಲಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈಗಿನಿಂದಲೆ ತಯಾರಾಗಬೇಕು. ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಪಣ ತೊಡಬೇಕು. ಪಕ್ಷದ ಕಾರ್ಯಾಲಯದಲ್ಲಿ ಪಕ್ಷ ಚಟುವಟಿಕೆ ಬಗ್ಗೆ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕರ್ತರು ಚುನಾವಣೆಯಲ್ಲಿ ಗೆಲ್ಲಲು ರಣತಂತ್ರ ರೂಪಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರುಗಳಾದ ರಾಜೀವ ಕುಂಬಿ, ಸಾಹೇಬಜಾನ್ ಹವಾಲ್ದಾರ, ಮಹಾದೇವಪ್ಪ ಅಣ್ಣಿಗೇರಿ, ಫಕ್ಕೀರೇಶ ಮ್ಯಾಟಣ್ಣನವರ, ಕಿರಣ ನವಲೆ, ನಾರಾಯಣಸಾ ಪವಾರ, ಬಾಬಣ್ಣ ಅಳವಂಡಿ, ನೀಲಪ್ಪ ಶೆರಸೂರಿ, ರಾಮಣ್ಣ ಅಡಗಿಮನಿ, ಪ್ರಕಾಶ ಕೊಂಚಿಗೇರಿಮಠ, ಸರ್ಫರಾಜ ಸೂರಣಗಿ ಪೈಮ್ ಪಲ್ಲಿ, ಫಕ್ಕೀರೇಶ ನಂದೆಣ್ಣನವರ, ನೀಲಪ್ಪ ಪೂಜಾರ, ಶಿವಾನಂದ ಲಿಂಗಶೆಟ್ಟಿ, ನೀಲಪ್ಪ ಪಡಗೇರಿ, ಈರಣ್ಣ ಅಂಕಲಕೋಟಿ, ರಾಜು ಕಳ್ಳಿ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ, ನಗರ ಅಧ್ಯಕ್ಷ ಅಮರೀಶ ತೆಂಬದಮನಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಆಡಳಿತ ನೀಡುತ್ತಿದ್ದು, ಭರವಸೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸರಿಯಾದ ನಿಟ್ಟಿನಲ್ಲಿ ಜನರಿಗೆ ಹತ್ತಿರವಾಗುತ್ತಿರವ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳನ್ನು ತಿಳಿಸುವ ಮೂಲಕ ಪಕ್ಷದ ಗೆಲುವಿಗೆ ಕಾರ್ಯಕರ್ತರು ಶ್ರಮಿಸೋಣ ಎಂದು ಹೇಳಿದರು.


