ಚಿತ್ರದುರ್ಗ:- ಚಿತ್ರದುರ್ಗ ತಾಲೂಕಿನ ಚಿಕ್ಕಗೊಂಡನಹಳ್ಳಿ ಬಳಿ ಭವಿಷ್ಯ ಹೇಳುವ ನೆಪದಲ್ಲಿ ರೈತನ ಉಂಗುರ ಕದ್ದ ಮಧ್ಯಪ್ರದೇಶ ಮೂಲದ ಐವರು ಸಾಧು ವೇಷಧಾರಿಗಳನ್ನು ಪೊಲೀಸರು ಬಂಧಿಸಿರುವಂತಹ ಘಟನೆ ಜರುಗಿದೆ.
Advertisement
ಬಂಧಿತರನ್ನು ಕಮಲನಾಥ್, ಸಂತೋಷ್ ನಾಥ್, ಚೈನ್ ನಾಥ್ ಚೌಹಾಣ್, ಶ್ರವಣ್ ಜೋಗಿ, ಚಾಲಕ ಟೋನಿಯಾ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 50ರ ಬಳಿ ರೈತ ರವಿಕುಮಾರ್ ನಿಂತಿದ್ದರು. ಕಾರಿನಲ್ಲಿ ಕೂರಿಸಿ ಭವಿಷ್ಯ ಹೇಳುವ ನೆಪದಲ್ಲಿ ರವಿಕುಮಾರ್ ಕೈಯಲ್ಲಿದ್ದ ಉಂಗುರ ಕಸಿದು ಬಾಯಲ್ಲಿ ಹಾಕಿಕೊಂಡಿದ್ದರು. ನಂತರ ರೈತ ರವಿಕುಮಾರ್ನನ್ನು ಕಾರಿನಿಂದ ಇಳಿಸಿ ಐವರು ಪರಾರಿ ಆಗಿದ್ದರು.
ತುರುವನೂರು ಠಾಣೆ ಪೊಲೀಸರಿಗೆ ರವಿಕುಮಾರ್ ಮಾಹಿತಿ ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು, ಐವರು ಸಾಧು ವೇಷಧಾರಿಗಳನ್ನು ಬಂಧಿಸಿದ್ದಾರೆ.