ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಾಲ್ವರು ಸೈಬರ್ ವಂಚಕರು ಅರೆಸ್ಟ್

0
Spread the love

ಬೆಂಗಳೂರು:- ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ, ಸಾರ್ವಜನಿಕರನ್ನು ವಂಚಿಸುತ್ತಿದ್ದ ನಾಲ್ವರು ಸೈಬರ್​ ವಂಚಕರನ್ನು ಬಂಧಿಸಿದ್ದಾರೆ. ಹಾಗೂ ₹60 ಲಕ್ಷ ಸೀಜ್ ಮಾಡಲಾಗಿದೆ.

Advertisement

ಸೈಯದ್ ಯೂನಸ್, ಮೊಹಮ್ಮದ್ ಕಲೀಮುಲ್ಲಾ, ಸೈಯ್ಯದ್ ಅರ್ಬಾಜ್ ಹಾಗೂ ಇಬ್ರಾಹಿಂ ಕಲೀಂ ಬಂಧಿತರು.

ವಂಚನೆಗೊಳಗಾದ ಸಾವಂತ್ ಪೂಜಾರಿ ಎಂಬುವರು ಫೇಸ್​ಬುಕ್ ನೋಡುವಾಗ ಆನ್​ಲೈನ್​ ಶಾಪಿಂಗ್​ ಆಪ್ ನಲ್ಲಿ ಪಾರ್ಟ್ ಟೈಮ್ ವರ್ಕ್ ಫ್ರಂ ಹೋಮ್ ಕೆಲಸ ಇರುವುದನ್ನು ಗಮನಿಸಿ ಲಿಂಕ್ ಒತ್ತಿದ್ದರು. ಯೂಸರ್ ಐಡಿ, ಪಾರ್ಸ್ ವರ್ಡ್ ರಚಿಸಿಕೊಂಡಿದ್ದಕ್ಕೆ ಅವರಿಗೆ ಬೋನಸ್ ರೂಪದಲ್ಲಿ 100 ರೂ.

ಆರೋಪಿಗಳು ಕಳುಹಿಸಿದ್ದರು. ಬಳಿಕ ಟೆಲಿಗ್ರಾಮ್ ಗ್ರೂಪ್ ರಚಿಸಿ ಫ್ಲಿಪ್​ ಕಾರ್ಟ್​ ಮಾಲ್ ಇಂಡಿಯಾದಲ್ಲಿ ಪ್ರಾಡಕ್ಟ್ ಖರೀದಿಸುವಂತೆ ವಿವಿಧ ಟಾಸ್ಕ್ ನೀಡಿದ್ದರು. ಅದೇ ರೀತಿ, 88 ಸಾವಿರ ರೂಪಾಯಿ ಮೌಲ್ಯದ ವಸ್ತುಗಳ ಖರೀದಿಗೆ ಪ್ರತಿಯಾಗಿ ಯಾವುದೇ ಹೆಚ್ಚುವರಿ ಹಣ ನೀಡದೇ ಆರೋಪಿಗಳು ವಂಚಿಸಿದ್ದರು.

ಈ ಸಂಬಂಧ ಸಾವಂತ್ ಪೂಜಾರಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಇನ್ಸ್​ಪೆಕ್ಟರ್​ ಎಂ.ಮಲ್ಲಿಕಾರ್ಜುನ್ ಹಾಗೂ‌ ಪಿಎಸ್‌ಐ ರಮಣ್ ಗೌಡ ನೇತೃತ್ವದ ತಂಡ, ಕಾರ್ಯಾಚರಣೆ ‌ನಡೆಸಿ ಆರೋಪಿಗಳ 30 ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದು, ಅದರಲ್ಲಿದ್ದ 60 ಲಕ್ಷ ರೂಗಳನ್ನು ಸೀಜ್ ಮಾಡಿ, ಕೃತ್ಯಕ್ಕೆ ಬಳಸಿದ್ದ ನಾಲ್ಕು ಮೊಬೈಲ್, ಎರಡು ಬ್ಯಾಂಕ್ ಪಾಸ್ ಬುಕ್ ವಶಕ್ಕೆ ಪಡೆದಿದ್ದರು.

ಪ್ರಕರಣದ ಮೊದಲ ಆರೋಪಿ ಹುಸೇನ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here