ಕನ್ನಡದ ಮೇರು ನಟಿ, ಚತುರ್ಭಾಷಾ ತಾರೆ ಬಿ.ಸರೋಜಾ ದೇವಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಇಂದು ಮುಂಜಾನೆ ಇಹಲೋಕ ತ್ಯಹಿಸಿದ್ದಾರೆ. ಅಷ್ಟಕ್ಕೂ ನಟಿಗೆ ಏನಾಗಿತ್ತು ಅನ್ನೋ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿದ್ದ ಬಿ ಸರೋಜಾ ದೇವಿ ಅವರಿಗೆ ಬೆಳಗ್ಗೆ ಏಳುತ್ತಿದ್ದಂತೆಯೇ ತಲೆಸುತ್ತು ಬಂದು ಬಿದ್ದಿದ್ದಾರೆ. ತಕ್ಷಣವೇ ಕುಟುಂಬಸ್ಥರು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಸರೋಜಾ ದೇವಿ ಮೃತಪಟ್ಟಿದ್ದರು.ಇಂದು ಬೆಳಗ್ಗೆ 8.30ಕ್ಕೆ ಸರೋಜ ದೇವಿ ಕೊನೆಯುಸಿರೆಳೆದಿದ್ದಾರೆ,
ಸರೋಜ ದೇವಿ ಅವರು 1967 ರಲ್ಲಿ ಶ್ರೀಹರ್ಷ ಅವರೊಂದಿಗೆ ಮದುವೆಯಾಗಿದ್ದರು. ಆದರೆ ಅನಾರೋಗ್ಯದ ಕಾರಣದಿಂದ 1986ರಲ್ಲಿ ಶ್ರೀಹರ್ಷ ನಿಧನರಾದರು. ಸರೋಜಾ ದೇವಿ ಅವರು ತಮ್ಮಿಬ್ಬರು ಮಕ್ಕಳು ಹಾಗೂ ಅಕ್ಕನ ಮೊಮ್ಮಕ್ಕಳನ್ನು ಅಗಲಿದ್ದಾರೆ. ಸರೋಜ ದೇವಿ ಅವರು ಅಕ್ಕನ ಮೊಮ್ಮಕ್ಕಳನ್ನೇ ದತ್ತು ಪಡೆದುಕೊಂಡಿದ್ದರು.
ಅಂತ್ಯ ಸಂಸ್ಕಾರದ ಬಗ್ಗೆ ಮಾತನಾಡಿರುವ ಪುತ್ರ ಗೌತಮ್, ನಾಳೆ ಬೆಳಗ್ಗೆ 11.30ಕ್ಕೆ ಹೊರಡುತ್ತೇವೆ. ಚನ್ನಪಟ್ಟಣ ತಾಲೂಕಿನ ಕಣ್ವ ಡ್ಯಾಮಿನ ದಶಾವರದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.



